ಕುವೆಂಪು ವಿಶ್ವವಿದ್ಯಾಲಯದಲ್ಲಿ 2ನೇ ರ‍್ಯಾಂಕ್ ಪಡೆದ ಕೆಸವಳಲು ನಿವೇದನ್.

175
firstsuddi

ಮೂಡಿಗೆರೆ : ತಾಲ್ಲೂಕಿನ ಕೆಸವಳಲು ಗ್ರಾಮದ ನಿವೇದನ್ ಹೆಚ್.ವಿ ಅವರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿಯಲ್ಲಿ 2ನೇ ರ‍್ಯಾಂಕ್ ಪಡೆದಿದ್ದಾರೆ. ಇವರು ಕೆಸವಳಲು ಗ್ರಾಮದ ವೇಣುಗೋಪಾಲ್ ಹೆಚ್.ಎಂ ಹಾಗೂ ನಂದೀಪುರ ಪಂಚಾಯಿತಿ ಮುಖ್ಯಾಧಿಕಾರಿ ಪ್ರತಿಮಾ ಅವರ ಪುತ್ರರಾಗಿದ್ದು, ಸೆಪ್ಟೆಂಬರ್ 2020ನೇ ಸಾಲಿನ ಸ್ನಾತಕೋತ್ತರ ಎಂಬಿಎ ಪದವಿ ಪರೀಕ್ಷೆಯಲ್ಲಿ 2ನೇ ರ‍್ಯಾಂಕ್ ಪಡೆದ ಇವರಿಗೆ ಕೆಸವಳಲು ಗ್ರಾಮಸ್ಥರು ಹಾಗೂ ಕುಟುಂಬದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.