ಕೆಆರ್‍ಎಸ್ ಡ್ಯಾಂ ಮೇಲೆ ಯುವಕನ ಜಾಲಿ ರೈಡ್‍ಗೆ ಸಾಥ್ ನೀಡಿದ್ದ ಕೆಎಸ್‍ಐಎಸ್‍ಎಫ್ ಇನ್ಸ್ ಪೆಕ್ಟರ್ ಅಮಾನತು!

147
Firstsuddi

ಮಂಡ್ಯ: ಸರ್ಕಾರಿ ವಾಹನದಲ್ಲಿ ಯುವಕನೋರ್ವ ಕೆಆರ್‍ಎಸ್ ಡ್ಯಾಂ ಮೇಲೆ ಜಾಲಿ ಡ್ರೈವ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಯುವಕನಿಗೆ ಸರ್ಕಾರಿ ವಾಹನ ಕೊಟ್ಟು ಸಾಥ್ ನೀಡಿದ್ದ ಇನ್ಸ್ ಪೆಕ್ಟರ್ ಎಸ್.ಬಿ.ಸ್ವಾಮಿ ಅವರನ್ನು ಸಸ್ಪೆಂಡ್ ಮಾಡಿ ಆದೇಶಿಸಲಾಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‍ಎಸ್ ಡ್ಯಾಂ ಮೇಲೆ ಸಾರ್ವಜನಿಕರಿಗೆ ನಿರ್ಬಂಧ ಹೇರಿದ್ದರೂ ಯುವಕನೋರ್ವ ಪೊಲೀಸ್ ಜೀಪ್ ಚಲಾಯಿಸಿದ್ದಲ್ಲದೇ ಮೊಬೈಲ್ ನಲ್ಲಿ ವೀಡಿಯೋ ಸಹ ಮಾಡಲಾಗಿತ್ತು. ಕಾನೂನು ಪಾಲಿಸಬೇಕಿದ್ದ ಪೊಲೀಸ್ ಸಿಬ್ಬಂದಿಯೇ ಯುವಕನಿಗೆ ಸಾಥ್ ನೀಡಿದ್ದು, ಯುವಕ ಜೀಪ್ ಚಲಾಯಿಸುತ್ತಿದ್ರೆ, ಪಕ್ಕದಲ್ಲಿ ಕುಳಿತಿದ್ದ ಪೊಲೀಸ್ ಅಧಿಕಾರಿ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದರು.

ಭದ್ರತೆ ನೋಡಿಕೊಳ್ಳಬೇಕಾಗಿದ್ದ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಯೇ ಯುವಕನ ಮೋಜು, ಮಸ್ತಿಗೆ ಸಾಥ್ ನೀಡಿದ್ದರಿಂದ ಅವರನ್ನು ಅಮಾನತು ಮಾಡಲಾಗಿದೆ.