ಕೆಆರ್ ಎಸ್ ಅಣೆಕಟ್ಟು, ಬೇಬಿ ಬೆಟ್ಟಕ್ಕೆ ಇಂದು ಸುಮಲತಾ ಅಂಬರೀಶ್ ಭೇಟಿ…

106
firstsuddi

ಮಂಡ್ಯ : ಕೆಆರ್ ಎಸ್ ಡ್ಯಾಂ ಬಿರುಕುಗೊಂಡಿರುವ ಸುಮಲತಾ ಅವರ ಹೇಳಿಕೆ ಸುಮಲತಾ ಮತ್ತು ಜೆಡಿಎಸ್ ನಾಯಕರ ನಡುವೆ ದೊಡ್ಡ ಕದನ ಶುರುವಾಗಿತ್ತು. ಇದೆಲ್ಲಾ ಬಳಿಕ ಜುಲೈ 7 ರಂದು ಸುಮಲತಾ ಅಂಬರೀಶ್ ಕೈಗೊಂಡಿದ್ದ ಅಕ್ರಮ ಗಣಿ ಪ್ರದೇಶ ಪರಿಶೀಲನೆ ಅರ್ಧಕ್ಕೆ ಮೊಟಕುಗೊಂಡಿತ್ತು. ಇದೀಗ ಇಂದು ಮತ್ತೆ ಕೆಆರ್ ಎಸ್ ಅಣೆಕಟ್ಟು ಮತ್ತು ಬೇಬಿಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ.

ಇಂದು ಮಧ್ಯಾಹ್ನ 12.30ರ ಸುಮಾರಿಗೆ ಕೆಆರ್ ಎಸ್ ಡ್ಯಾಂ ಗೆ ಭೇಟಿ ನೀಡಲಿರುವ ಸುಮಲತಾ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳಲಿದ್ದಾರೆ. ತದನಂತರ ಬೇಬಿ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.