ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಒಂದು ವರ್ಷದ ಪುಣ್ಯಸ್ಮರಣೆ-ಸಿಎಂ ಯಡಿಯೂರಪ್ಪ ಭಾವುಕ ಟ್ವೀಟ್…

342
firstsuddi

ಬೆಂಗಳೂರು : ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಅನಂತ್ ಕುಮಾರ್ ಅವರು ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷ ಕಳೆದಿದ್ದು, ಹೀಗಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಆತ್ಮೀಯ ಗೆಳೆಯನನ್ನು ನನೆದು ಭಾವುಕ ಟ್ವೀಟ್ ಮಾಡಿದ್ದಾರೆ “ಸರಳ ಸಜ್ಜನಿಕೆಯ ವ್ಯಕ್ತಿ, ಸಂಘಟನಾ ಚತುರ, ರಾಜ್ಯ ಮತ್ತು ಕೇಂದ್ರಕ್ಕು ಕೊಂಡಿಯಂತಿದ್ದ, ಅದ್ವಿತೀಯ ನಾಯಕ, ನನ್ನ ಪರಮಾಪ್ತ ಶ್ರೀ ಅನಂತ್ ಕುಮಾರ್ ಅವರು, ನಮ್ಮನ್ನಗಲಿದ ದಿನ ನೆನೆದರೆ ಮನಸ್ಸು ಭಾರವಾಗುವುದು.ದೇಶಕ್ಕಾಗಿ ನೀಡಿದ ಸೇವೆಯಿಂದ ಅವರು ಸದಾ ಜೀವಂತ. ಅದಮ್ಯ ಚೇತನ ಅನಂತ್ ಕುಮಾರ್ ಅವರ ಪುಣ್ಯತಿಥಿಯಂದು ನನ್ನ ಭಾವಪೂರ್ಣ ಶ್ರದ್ಧಾಂಜಲಿ ಎಂದು ಟ್ವೀಟ್ ಮಾಡಿದ್ದಾರೆ.