ಕೊಟ್ಟಿಗೆಹಾರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಅವ್ಯವಸ್ಥೆಗಳ ಬಗ್ಗೆ ಸಾರ್ವಜನಿಕರ ಆಕ್ರೋಶ…

772
firstsuddi

ಮೂಡಿಗೆರೆ : ಕೊಟ್ಟಿಗೆಹಾರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಹಾಕಿರುವ ಕಬ್ಬಿಣದ ಕೌಗಾರ್ಡ್‍ನ ಸಲಾಕೆಗಳು ತುಂಡಾಗಿ ಹಲವು ತಿಂಗಳಾದರೂ ಸರಿಪಡಿಸದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಟ್ಟಿಗೆಹಾರ ಟಿ.ಎ. ಖಾದರ್ ಅವರು ಮಾತನಾಡಿ ಧರ್ಮಸ್ಥಳ ಹಾಗೂ ಮಂಗಳೂರಿಗೆ ತೆರಳುವ ಸಾವಿರಾರು ಪ್ರಯಾಣಿಕರು ಕೊಟ್ಟಿಗೆಹಾರ ಬಸ್ ನಿಲ್ದಾಣದಲ್ಲಿ ತಿಂಡಿ, ಊಟಕ್ಕೆ ಬಸ್‍ಗಳನ್ನು ನಿಲ್ಲಿಸುತ್ತಾರೆ. ಹೆಂಗಸರು, ಮಕ್ಕಳು ಇಲ್ಲಿ ಶೌಚಾಲಯ ಸರಿಯಿಲ್ಲದ ಕಾರಣ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಿ ಬಸ್ ನಿಲ್ದಾಣದ ಶೌಚಾಲಯದ ಸಮಸ್ಯೆಯನ್ನು ಬಗೆಹರಿಸಬೇಕು ಎಂದರು.
ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಜೆಡಿಎಸ್ ಮುಖಂಡ ಆದರ್ಶ ಬಾಳೂರು ಅವರು ಆಟೋ ಮತ್ತು ಕಾರುಗಳು ಪ್ರಯಾಣಿಕರನ್ನು ಡ್ರಾಪ್ ಮಾಡಲು ಬಸ್ ಸ್ಟಾಂಡ್ ಒಳಗೆ ಪ್ರವೇಶ ಮಾಡುತ್ತಾರೆ. ಮುರಿದ ಸಲಾಕೆಗಳ ಮಧ್ಯ ಟಯರ್ ಸಿಲುಕಿಕೊಂಡು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಾಗೂ ದಿನನಿತ್ಯ ಸಾವಿರಾರು ಪ್ರಯಾಣಿಕರು ಹಾಗೂ ಶಾಲಾ ಮಕ್ಕಳು ಬಸ್ ನಿಲ್ದಾಣದ ಪ್ರವೇಶ ಧ್ವಾರದಲ್ಲೇ ಓಡಾಡುತ್ತಾರೆ. 3ರಿಂದ 4 ಜನ ಪ್ರಯಾಣಿಕರು ಇಲ್ಲಿ ಬಿದ್ದು, ಸಣ್ಣಪುಟ್ಟ ಗಾಯಗಳು ಆಗಿದ್ದು, ಈ ಬಗ್ಗೆ ಹಲವು ಬಾರಿ ನಾವು ಅಧಿಕಾರಿಗಳ ಗಮನಕ್ಕೆ ತಂದಿದ್ದು, ಆದರೆ ನಿರ್ಲಕ್ಷ ವಹಿಸುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಇಲಾಖೆಯವರು ಗಮನಹರಿಸಿ ಕಬ್ಬಿಣದ ಸಲಾಕೆಗಳನ್ನು ಸರಿಪಡಿಸಿಕೊಡಬೇಕು ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.