ಕೊಟ್ಟಿಗೆಹಾರ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಗ್ರಾಮೀಣ ಶೈಲಿಯ ಆಟಗಳನ್ನು ಪರಿಚಯಿಸಿದ ಶಿಕ್ಷಕಿಯರು…

363
firstsuddi

ಬಣಕಲ್: ಪ್ರೌಢಶಾಲೆಯಲ್ಲಿ ಗ್ರಾಮೀಣ ಶೈಲಿಯ ಆಟಗಳನ್ನು ಮಕ್ಕಳಿಗೆ ಪರಿಚಯಿಸುವ ಮೂಲಕ ಮುಖ್ಯ ಶಿಕ್ಷಕಿ ಕಮಲ ಗಾಳಿಪಟ ಹಾರಿಸುವ ಮೂಲಕ ಗ್ರಾಮೀಣ ಆಟಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮಕ್ಕಳು ಆಧುನೀಕತೆಯ ಪ್ರಭಾವಕ್ಕೆ ಒಳಗಾಗಿ ಮೊಬೈಲ್ ಬಳಕೆ ಹೆಚ್ಚುತ್ತಿದ್ದು, ಇದರಿಂದಾಗಿ ಗ್ರಾಮೀಣ ಆಟಗಳನ್ನು ಮರೆತು ಬಿಟ್ಟಿದ್ದಾರೆ. ಲಗೋರಿ, ಕಣ್ಣುಮುಚ್ಚಾಲೆ, ಗಾಳಿಪಟ ಮುಂತಾದ ಆಟಗಳು ಮೂಲೆ ಗುಂಪಾಗುತ್ತಿವೆ. ಮಕ್ಕಳು ಗ್ರಾಮೀಣ ಆಟಗಳತ್ತ ಆಸಕ್ತಿ ತೋರಿಸಬೇಕು ಎಂದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಗಾಳಿಪಟ ತಯಾರಿಸುವ ಬಗೆ ಮತ್ತು ಹಾರಿಸುವ ವಿಧಾನವನ್ನು ತೋರಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕಿ ಸೌಮ್ಯ, ಕವಿತ ಇದ್ದರು.