ಚಿಕ್ಕಮಗಳೂರು : ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಚಿಕ್ಕಮಗಳೂರಿಗೆ ಆಗಮಿಸಿದ ಹೆಲಿಕಾಪ್ಟರ್‍ಗೆ ಬೆಂಗಳೂರಿನಲ್ಲಿ ಲ್ಯಾಂಡ್ ಮಾಡಲು ನಿರಾಕರಿಸಲಾಗಿದೆ. ಶೃಂಗೇರಿಯಿಂದ 4ಗಂಟೆಗೆ ಹೊರಡಬೇಕಿದ್ದ ಹೆಲಿಕಾಪ್ಟರ್‍ಗೆ ಡಿ. ಕೆ. ಶಿವಕುಮಾರ್ ಅವರು ಅರ್ಧಗಂಟೆ ತಡವಾಗಿ ಆಗಮಿಸಿದ್ದು, ಬ್ಯಾಡ್ ಲೈಟ್ ಆಗುವ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್‍ಗೆ ನಿರಾಕರಿಸಿದ್ದು, ಹೀಗಾಗಿ ಡಿ.ಕೆ. ಶಿವಕುಮಾರ್ ಅವರ ಕುಟುಂಬ ಮಂಗಳೂರಿಗೆ ಹೆಲಿಕಾಪ್ಟರ್‍ನಲ್ಲಿ ತೆರಳಿ ಅಲ್ಲಿಂದ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ.









