ಮೂಡಿಗೆರೆ :ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ರೋಟರಿ ಕ್ಲಬ್ (RI Dist 3182, Zone 08) ವತಿಯಿಂದ ತಾಲೂಕಿನ ಹಳಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಇತ್ತೀಚೆಗೆ ‘ವನಮಹೋತ್ಸವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರೋಟರಿ ಸದಸ್ಯರು ಹಾಗೂ ಶಾಲಾ ಮಕ್ಕಳ ಜಂಟಿ ಸಹಭಾಗಿತ್ವದಲ್ಲಿ ವಿವಿಧ ತಳಿಯ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಪಾಸ್ಟ್ ಝೋನಲ್ ಲೆಫ್ಟಿನೆಂಟ್ ಆರ್‌ಟಿಎನ್. ಆದರ್ಶ ಅವರು, “ಇತ್ತೀಚಿನ ದಿನಗಳಲ್ಲಿ ಸಕಾಲಕ್ಕೆ ಮಳೆಯಾಗದಿರಲು ಮತ್ತು ಶುದ್ಧ ಗಾಳಿಯ ಅಭಾವಕ್ಕೆ ಮರ-ಗಿಡಗಳ ಅತಿಯಾದ ನಾಶವೇ ಪ್ರಮುಖ ಕಾರಣ. ಅಭಿವೃದ್ಧಿ ಅಥವಾ ಅನಿವಾರ್ಯ ಕಾರಣಗಳಿಗೆ ಒಂದು ಮರವನ್ನು ಕಡಿದರೆ, ಅದಕ್ಕೆ ಪ್ರತಿಯಾಗಿ ಕನಿಷ್ಠ ಎರಡು ಸಸಿಗಳನ್ನು ನೆಟ್ಟು ಪೋಷಿಸಬೇಕು. ಆಗ ಮಾತ್ರ ಪ್ರಕೃತಿಯನ್ನು ಕಾಪಾಡಿಕೊಳ್ಳಲು ಸಾಧ್ಯ. ಶಾಲಾ ಹಂತದಿಂದಲೇ ಮಕ್ಕಳು ಪರಿಸರ ಕಾಳಜಿಯನ್ನು ಮೈಗೂಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಮೂಡಿಗೆರೆ ಘಟಕದ ಅಧ್ಯಕ್ಷ ಬಿ. ಕೆ. ದಿನೇಶ್, ಕಾರ್ಯದರ್ಶಿ ಆರ್‌ಟಿಎನ್. ಸಂತೋಷ್, ನಿಕಟಪೂರ್ವ ಅಧ್ಯಕ್ಷ ಆರ್‌ಟಿಎನ್. ಪ್ರಸಾದ್, ಸದಸ್ಯರಾದ ಆರ್‌ಟಿಎನ್. ಸಂದೀಪ್, ಆರ್‌ಟಿಎನ್. ಸುಭಾಷ್, ಆರ್‌ಟಿಎನ್. ಅವಿನ್, ಆರ್‌ಟಿಎನ್. ಸುನಿಲ್ ಉಪಸ್ಥಿತರಿದ್ದರು.
ಇದೇ ವೇಳೆ ಶಾಲೆಯ ಮುಖ್ಯ ಶಿಕ್ಷಕ ಮಂಜು ನಾಯ್ಕ್, ಶಿಕ್ಷಕಿ ರೇಣುಕಮ್ಮ, ಶಾಲಾ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಸಾರ್ವಜನಿಕರು ಭಾಗವಹಿಸಿ ಸಾಥ್ ನೀಡಿದರು.
ಅಂತಿಮವಾಗಿ “ಒಂದು ಸಸಿ ನೆಡೋಣ – ಪರಿಸರ ಉಳಿಸೋಣ” ಹಾಗೂ “ಸೇವೆಯೇ ಶ್ರೇಷ್ಠ” ಎಂಬ ಆಶಯದೊಂದಿಗೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಮುಕ್ತಾಯಗೊಳಿಸಲಾಯಿತು.
Home ಸ್ಥಳಿಯ ಸುದ್ದಿ ಮೂಡಿಗೆರೆ ರೋಟರಿ ಕ್ಲಬ್‌ನಿಂದ ವನಮಹೋತ್ಸವ: ಹಳಿಕೆ ಶಾಲಾ ಆವರಣದಲ್ಲಿ ಸಸಿ ನೆಟ್ಟು ಪರಿಸರ ಜಾಗೃತಿ.










