ಸುಳ್ಯ:ಸಂಪಾಜೆ ಬಳಿ ಭೀಕರ ಅಫಘಾತ – ಇಬ್ಬರ ಸಾವು…

709
firstsuddi

ಸುಳ್ಯ: ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಬೈಕಿನ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವನಪ್ಪಿದ ಘಟನೆ ಕೊಡಗು ಸಂಪಾಜೆ ಬಳಿಯ ಕೊಯಿ ನಾಡಿನಲ್ಲಿ ನಡೆದಿದೆ. ಮೃತ ಯುವಕರನ್ನು ಜಾರ್ಖಂಡ್ ಮೂಲದವರು ಎಂದು ಗುರುತಿಸಲಾಗಿದೆ. ಜಾರ್ಖಂಡ್ ಮೂಲದ ಇಬ್ಬರು ಯುವಕರು ಬೈಕಿನಲ್ಲಿ ಸುತ್ತುವ ಉದ್ದೇಶದಿಂದ ಹೊರಟಿದ್ದು, ಇಂದು ಬೆಳಿಗ್ಗೆ ಮಂಗಳೂರು ಕಡೆಯಿಂದ ಮಡಿಕೇರಿ ಕಡೆಗೆ ಹೋಗುವಾಗ ಕೊಯಿನಾಡಿನಲ್ಲಿ ಸಿದ್ದಾರಪುರದಿಂದ ಮಂಗಳೂರಿಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸಿಗೆ ಡಿಕ್ಕಿ ಹೊಡೆದಿದ್ದು ಬೈಕ್ ಸವಾರರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.