ಕೊರೊನಾ ಭೀತಿ-ಏಪ್ರಿಲ್ 20ರ ವರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಂದೂಡಿಕೆ ಮಾಡಿ ಶಿಕ್ಷಣ ಇಲಾಖೆ ಆದೇಶ…

167
firstsuddi

ಬೆಂಗಳೂರು : ಮಹಾಮಾರಿ ಕೊರೊನಾ ವೈರಸ್ ಭೀತಿ ಹಿನ್ನೆಲೆ, ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಕಾಲ ಅಂದರೆ ಏಪ್ರಿಲ್ 14ರವರೆಗೂ ಇಡೀ ಭಾರತವನ್ನು ಲಾಕ್‍ಡೌನ್ ಮಾಡಿ ಆದೇಶ ಹೊರಡಿಸಿದ್ದು, ಈ ಹಿನ್ನೆಲೆ, ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಏಪ್ರಿಲ್ 20ರವರೆಗೆ ಮುಂದೂಡಿಕೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೇ 7 ರಿಂದ 9ನೇ ತರಗತಿ ಪರೀಕ್ಷೆ ಹಾಗೂ ಆರ್‍ಟಿಇ ಅಡಿಯಲ್ಲಿ ನಡೆಯುವ ಪ್ರವೇಶಾತಿಯನ್ನೂ ಕೂಡಾ ಮುಂದೂಡಿಕೆ ಮಾಡಿ ಆದೇಶ ಹೊರಡಿಸಿದೆ.