ಚಿಕ್ಕಮಗಳೂರು : ಕೊರೊನಾ ಮಹಾಮಾರಿ ದೂರಾಗಿ ಪರಿಸ್ಥಿತಿ ತಿಳಿಯಾದ ನಂತರ ನಗರದಲ್ಲಿ ಮತ್ತೊಮ್ಮೆ ಚಿಕ್ಕಮಗಳೂರು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ನಗರದ ಶ್ರೀಮಾಸ್ ಸ್ಟ್ರೈಲ್ ಎನ್ ಸ್ಮೈಲ್ ಬ್ಯೂಟಿ ಸಲೂನ್ ತರಬೇತಿ ಅಕಾಡೆಮಿಯಲ್ಲಿ ಇಂದು ವಿದ್ಯಾರ್ಥಿಗಳು ಮತ್ತು ಬ್ಯೂಟಿಪಾರ್ಲರ್ ಕಾರ್ಮಿಕರಿಗೆ ಪಡಿತರ ಕಿಟ್ ಗಳನ್ನು ವಿತರಿಸಿ ಅವರು ಮಾತನಾಡಿದರು.
ಕೊರೊನಾ ಸೋಂಕು ಮತ್ತು ಲಾಕ್ ಡೌನ್ ನಿಂದಾಗಿ ಜನ ಕುಳಿತಲ್ಲೇ ಕುಳಿತು, ನಿಂತಲ್ಲೇ ನಿಂತು ಮಾನಸಿಕ ಮತ್ತು ದೈಹಿಕವಾಗಿ ಜಡವಾದಂತಾಗಿದ್ದಾರೆ ಅವರಲ್ಲಿ ಮತ್ತೆ ಹೊಸ ಸ್ಪೂರ್ತಿ ತುಂಬಿ ಅವರನ್ನು ಕ್ರಿಯಾಶೀಲಗೊಳಿಸುವ ನಿಟ್ಟಿನಲ್ಲಿ ಕಳೆದ ಬಾರಿಗಿಂತ ಈ ಬಾರಿ ಇನ್ನೂ ಅದ್ದೂರಿಯಾಗಿ ಚಿಕ್ಕಮಗಳೂರು ಹಬ್ಬವನ್ನು ಆಯೋಜಿಸಲಾಗುವುದು ಎಂದರು.
ಈ ಕುರಿತು ಮೂಡಬಿದರೆ ಆಳ್ವಾಸ್ ನುಡಿ ಸಿರಿಯ ಮುಖ್ಯಸ್ಥ ಮೋಹನ್ ಆಳ್ವಾ ಅವರೊಂದಿಗೆ ತಾವು ಚರ್ಚಿಸಿದ್ದು ಈ ಬಾರಿಯ ಚಿಕ್ಕಮಗಳೂರು ಹಬ್ಬದಲ್ಲಿ ಸಾಂಸ್ಕøತಿಕ ಮತ್ತು ಮನರಂಜನೆ ಕಾರ್ಯಕ್ರಮಗಳು ಹಾಗೂ ಆಹಾರ ಮೇಳ ಇರಲಿವೆ ಎಂದು ತಿಳಿಸಿದರು.
ಕಡೂರು-ಚಿಕ್ಕಮಗಳೂರು ಹೆದ್ದಾರಿ ನಿರ್ಮಾಣ ಕಾಮಗಾರಿ ಡಿಸೆಂಬರ್ ಗೆ ಪೂರ್ಣಗೊ ಳ್ಳಲಿದೆ. ಬಸವನಹಳ್ಳಿ ಕೆರೆ ನೋಟಿಫಿಕೇಷನ್ ಗೆ 36 ಕೋಟಿ ರೂ. ಅನುದಾನ ಮಂಜೂರು ಮಾಡಿ ಸಲಾಗಿದ್ದು ಆಸ್ಟ್ರೇಲಿಯಾ ಮತ್ತು ಸ್ವಿಜರ್ ಲ್ಯಾಂಡ್ ಮಾದರಿಯಲ್ಲಿ ಕೆರೆಯನ್ನು ಅಭಿವೃದ್ದಿಗೆ ಪಡಿಸಲಾಗುವುದು ಎಂದು ಹೇಳಿದರು.
630 ಕೋಟಿ ರೂ. ವೆಚ್ಚದ ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾರ್ಯ ನಗರದಲ್ಲಿ ಈಗಾಗಲೇ ಆರಂಭವಾಗಿದೆ ಎಂದು ತಿಳಿಸಿದರು.
ದಲಿತ್ ಜನಸೇನಾ ಜಿಲ್ಲಾಧ್ಯಕ್ಷ ಅನಿಲ್ ಆನಂದ್ ಮಾತನಾಡಿ ಹೆದ್ದಾರಿ ನಿರ್ಮಾಣದ ವೇಳೆ ಸಾವಿರಾರು ಮರಗಳನ್ನು ಕಡಿದು ಹಾಕಲಾಗುತ್ತಿದ್ದು ಅದರ ಬದಲಿಗೆ ಮರಗಳನ್ನು ಬೇರು ಸಮೇತ ಬೇರೆಡೆಗೆ ಸಾಗಿಸಿ ನೆಡುವ ವ್ಯವಸ್ಥೆ ಮಾಡುವಂತೆ ಶಾಸಕರಿಗೆ ಮನವಿ ಮಾಡಿದರು.
ಸವಿತಾ ಸಮಾಜ ಮೀಸಲಾತಿ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಜೆ.ಸತ್ಯನಾರಾಯಣ, ಬಿಜೆಪಿ ಜಿಲ್ಲಾ ವಕ್ತಾರ ವರಸಿದ್ದಿ ವೇಣುಗೋಪಾಲ್, ಅಕಾಡೆಮಿಯ ಪ್ರಾಂಶುಪಾಲೆ ಮಂಜುಶ್ರೀ ಉಪಸ್ಥಿತರಿದ್ದರು.










