ಕ್ಯಾನ್ಸರ್ ನಿಂದ ಪಾಕಿಸ್ತಾನದ ಸ್ಟಾರ್ ಆಟಗಾರ ಆಸಿಫ್ ಅಲಿ ಅವರ 2 ವರ್ಷದ ಮಗಳು ಸಾವು…

276
firstsuddi

ವಾಷಿಂಗ್‍ಟನ್ : ಪಾಕಿಸ್ತಾನದ ತಂಡದ ಸ್ಟಾರ್ ಆಟಗಾರ ಆಸಿಫ್ ಅಲಿ ಅವರ 2 ವರ್ಷದ ಮಗಳು ನೂರ್ ಫಾತಿಮಾ ಕ್ಯಾನ್ಸರ್ ಖಾಯಿಲೆಯಿಂದ ಮೃತಪಟ್ಟಿದ್ದು, 4ನೇ ಹಂತದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಮಗಳನ್ನು ಅಮೇರಿಕದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಆಸಿಫ್ ಅಲಿ ಅವರು ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ ಪ್ರತಿನಿಧಿಸುತ್ತಿದ್ದರು. ಮಗಳು ಮೃತಪಟ್ಟಿರುವ ವಿಷಯವನ್ನು ಇಸ್ಲಾಮಾಬಾದ್ ಯುನೈಟೆಡ್ ತಂಡ ತನ್ನ ಟ್ವಿಟರ್ ನಲ್ಲಿ ಪ್ರಸ್ತಾಪಿಸಿದ್ದು, ಆಸಿಫ್ ಅಲಿ ಅವರು ತಮ್ಮ ಮಗಳನ್ನು ಕಳೆದುಕೊಂಡಿರುವುದರಿಂದ ನಮಗೆ ಬಹಳ ದುಃಖ ಉಂಟಾಗಿದೆ. ಆಸಿಫ್ ಅಲಿ ಹಾಗೂ ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಟ್ವೀಟ್ ಮಾಡಿದೆ.