ಖ್ಯಾತ ಹಾಸ್ಯ ನಟ ಚಾರ್ಲಿ ಚಾಪ್ಲಿನ್ ಪುತ್ರಿ ಜೋಸೆಫೀನ್ ನಿಧನ…

42
firstsuddi

ಕಾಮಿಡಿ ಜಗತ್ತಿನ ಲೆಜೆಂಡ್ ಚಾರ್ಲಿ ಚಾಪ್ಲಿನ್ ಪುತ್ರಿ ಜೋಸೆಫೀನ್ ಪ್ಯಾರಿಸ್‍ನಲ್ಲಿ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಜುಲೈ 13ರಂದೇ ಜೋಸೆಫೀನ್ ಇಹಲೋಕ ತ್ಯಜಿಸಿದ್ದಾರೆ ಎಂದು ಯುಎಸ್ ಮೂಲದ ಮಾಧ್ಯಮಗಳು ವರದಿ ಮಾಡಿವೆ. ಜೋಸೆಫೀನ್ ಚಾಪ್ಲಿನ್, ಚಾರ್ಲಿ ಚಾಪ್ಲಿನ್ ಮತ್ತು ಊನಾ ಓ’ನೀಲ್ ದಂಪತಿಗೆ ಜನಿಸಿದ ಎಂಟು ಮಕ್ಕಳಲ್ಲಿ ಮೂರನೆಯವರಾಗಿದ್ದರು.

ಜೋಸೆಫೀನ್ ಕೂಡ ನಟಿಯಾಗಿದ್ದು, ತನ್ನ ತಂದೆಯ ಜೊತೆಯೇ ಚಿಕ್ಕ ವಯಸ್ಸಿನಲ್ಲೇ ಬಣ್ಣ ಹಚ್ಚಿದ್ದರು. 1952ರಲ್ಲೇ ಸಿನಿಮಾ ರಂಗ ಪ್ರವೇಶ ಮಾಡಿದ್ದ ಜೋಸೆಫೀನ್, ತಂದೆ ಚಾರ್ಲಿ ಚಾಪ್ಲಿನ್ ಜೊತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

ದಿ ಕ್ಯಾಂಟರ್ಬರಿ, ಎಸ್ಕೇಪ್ ಟು ದಿ ಸನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಅಲ್ಲದೇ ದೂರದರ್ಶನಕ್ಕಾಗಿ ಹಲವಾರು ಸರಣಿಗಳಲ್ಲಿ ಇವರು ನಟಿಸಿದ್ದಾರೆ. ಜೋಸೆಫೀನ್ ನಿಧನಕ್ಕೆ ಹಲವರು ಕಂಬನಿ ಕೂಡ ಮಿಡಿದಿದ್ದಾರೆ. ಮೂವರು ಗಂಡು ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಜೋಸೆಫೀನ್ ಅಗಲಿದ್ದಾರೆ.