ಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದ ಮೂವರು ಅರೆಸ್ಟ್ ; ಪೆಟ್ರೋಲ್ ಬಾಂಬ್, ಜೀವಂತ ಪಿಸ್ತೂಲ್ ವಶ…

66
firstsuddi

ಬೆಂಗಳೂರು : ಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದ ಮೂವರು ಆರೋಪಿಗಳನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.

ಫಯಾಜ್, ಸೈಯದ್ ಅಸ್ಗರ್ ಹಾಗೂ ಮುನ್ನಾವರ್ ಎಂಬುವರನ್ನು ಬಂಧಿಸಿ, ಬಂಧಿತರಿಂದ 1 ನಾಡಾ ಪಿಸ್ತೂಲ್, 1 ಜೀವಂತ ಗುಂಡು, 10 ಬಿಯರ್ ಬಾಟಲ್, ಲಾಂಗ್ ಮಚ್ಚುಗಳು ವಶಕ್ಕೆ ಪಡೆದಿಕೊಳ್ಳಲಾಗಿದೆ. ಈ ಮೂವರು ಸರಾಯಿ ಪಾಳ್ಯದ ನಿವಾಸಿಗಳು ಎಂದು ತಿಳಿದುಬಂದಿದೆ.

ಹೆಣ್ಣೂರು ಠಾಣೆ ರೌಡಿಶೀಟರ್ ಮೊಹಮ್ಮದ್ ಅಜಿಮುದ್ದೀನ್ ಕೆಲ ದಿನಗಳ ಹಿಂದೆ ಆರೋಪಿ ಫಯಾಜ್ ವಾಸವಾಗಿದ್ದ ಮನೆಯನ್ನ ಬೇರೆಯವರಿಗೆ ಮಾರಾಟ ಮಾಡಿದ್ದರೂ ಮನೆ ಖಾಲಿ ಮಾಡಿರಲಿಲ್ಲವಂತೆ. ಹೀಗಾಗಿ, ಮೊಹಮ್ಮದ್ ಬಲವಂತವಾಗಿ ಖಾಲಿ ಮಾಡಿಸಿ ಅವಮಾನ ಮಾಡಿದ್ದನಂತೆ. ಇದರಿಂದ ಅಸಮಾಧಾನಗೊಂಡಿದ್ದ ಫಯಾಜ್, ಹಳೆ ದ್ವೇಷ ತೀರಿಸಿಕೊಳ್ಳಲು ಆಸ್ಗರ್ ಹಾಗೂ ಮುನ್ನಾವರ್ ಜತೆ ಮಾತುಕತೆ ನಡೆಸಿದ್ದ.

ಅದಲ್ಲದೇ ಸಮಾಜದಲ್ಲಿ ಅಶಾಂತಿ ಮೂಡಿಸಲು ಪ್ಲ್ಯಾನ್ ಮಾಡಿಕೊಂಡ ಆರೋಪಿಗಳು ನಾಡಪಿಸ್ತೂಲ್, ಬಿಯರ್ ಬಾಟೆಲ್ ಗಳನ್ನು ಗುಪ್ತವಾಗಿ ಸಂಗ್ರಹಿಸಿ ಫಯಾಜ್ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೂರ್ವ ವಿಭಾಗದ ಪೊಲೀಸರು ವಿಶೇಷ ತಂಡಗಳನ್ನ ರಚಿಸಿ ಮೂವರು ಆರೋಪಿಗಳನ್ನ ಹೆಡೆಮುರಿ ಕಟ್ಟಿದ್ದಾರೆ.