ಚಾಮರಾಜನಗರ : ಗುಂಡು ಹಾರಿಸಿಕೊಂಡು ಒಂದೇ ಕುಟುಂಬದ ಐದು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ಹೊರವಲಯದಲ್ಲಿ ನಡೆದಿದೆ. ಮೈಸೂರು ಮೂಲದ ಓಂಕಾರ್ ಪ್ರಸಾದ್ (35) ತಂದೆ ನಾಗರಾಜಭಟ್ರು (60), ತಾಯಿ ಹೇಮಾಲತಾ (50), ಪತ್ನಿ ನಿಖಿತಾ, ಮಗ ಆರ್ಯನ್ (4) ಆತ್ಮಹತ್ಯೆ ಮಾಡಿಕೊಂಡವರು. ಓಂಕಾರ್ ಪ್ರಸಾದ್ ಅವರು ರಿಯಲ್ ಎಸ್ಟೇಟ್ ನಡೆಸುತ್ತಿದ್ದು, ಅದರಲ್ಲಿ ನಷ್ಟ ಅನುಭವಿಸಿದ್ದರು ಎನ್ನಲಾಗಿದೆ. ಮೃತರು ಮೂರು ದಿನಗಳ ಹಿಂದೆ ಗುಂಡ್ಲುಪೇಟೆಗೆ ಆಗಮಿಸಿದ್ದು, ನಿನ್ನೆ ರಾತ್ರಿ ಗುಂಡ್ಲುಪೇಟೆಯ ನಂದಿ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿದ್ದರು. ಬಳಿಕ ಐವರು ಪ್ರೊ. ಚಂದ್ರಗುರು ಎಂಬುವವರಿಗೆ ಸೇರಿದ ಜಮೀನಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










