ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ 10ಲಕ್ಷ ರೂ ನೆರವು ನೀಡಿದ ನಟ ಸೂರ್ಯ ಹಾಗೂ ಕಾರ್ತಿ…

290
firstsuddi

ಚೆನ್ನೈ : ಕಾಲಿವುಡ್ ನಟರಾದ ಸೂರ್ಯ ಹಾಗೂ ಕಾರ್ತಿ ಅವರು ಕೇರಳ ಹಾಗೂ ಕರ್ನಾಟಕದಲ್ಲಿ ಪ್ರವಾಹದಿಂದ ಮನೆ ಮಠ ಕಳೆದುಕೊಂಡ ಸಂತ್ರಸ್ತರಿಗೆ 10ಲಕ್ಷ ರೂ ನೆರವನ್ನು ನೀಡಿದ್ದಾರೆ. ಸೂರ್ಯ ಹಾಗೂ ಕಾರ್ತಿ ಅವರು ಹಲವು ಚಾರಿಟಿ ಕೆಲಸಗಳನ್ನು ಮಾಡುತ್ತಿದ್ದು, ಕಷ್ಟದಲ್ಲಿ ಇರುವವರಿಗೆ ಸಹಾಯಹಸ್ತ ನೀಡುತ್ತಾರೆ. ಅದರಂತೆ ಅವರು ಈ ವರ್ಷ ಕೇರಳ ಹಾಗೂ ಕರ್ನಾಟಕದಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹದಿಂದ ಮನೆಯನ್ನು ಕಳೆದುಕೊಂಡಿರುವ ಸಂತ್ರಸ್ತರಿಗಾಗಿ 10ಲಕ್ಷ ರೂ ನೆರವನ್ನು ನೀಡಿದ್ದಾರೆ.