ಗುಟ್ಕಾ ಬೇಕಾದ್ರೂ ತಿನ್ನಿ, ಮದ್ಯನಾದ್ರೂ ಸೇವಿಸಿ, ಆದರೆ.. – ಬಿಜೆಪಿ ಸಂಸದನ ವಿವಾದಿತ ಹೇಳಿಕೆ

106
firstsuddi

ಭೋಪಾಲ್ : ಮದ್ಯಪಾನ ಬೇಕಾದರೂ ಮಾಡಿ, ಗುಟ್ಕಾ ಬೇಕಾದರೂ ತಿನ್ನಿ, ಅಯೋಡೆಕ್ಸ್‌ನಾದ್ರೂ ತಿನ್ನಿ ಆದರೆ, ನೀರಿನ ಮಹತ್ವವನ್ನು ಅರ್ಥಮಾಡಿಕೊಳ್ಳಿ ಎಂದು ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಭಾನುವಾರ ಜಿಲ್ಲೆಯ ರೇವಾದ ಕೃಷ್ಣರಾಜ್ ಕಪೂರ್ ಸಭಾಂಗಣದಲ್ಲಿ ಜಲ ಸಂರಕ್ಷಣೆ ಕುರಿತಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭೂಮಿ ನೀರಿಲ್ಲದೆ ಒಣಗುತ್ತಿವೆ, ನಾವು ಭೂಮಿಯನ್ನು ಮತ್ತು ನೀರನ್ನು ಉಳಿಸಬೇಕು. ನೀವು ಗುಟ್ಕಾನಾದ್ರೂ ತಿನ್ನಿ, ಮದ್ಯನಾದ್ರೂ ಸೇವಿಸಿ, ಅಯೋಡೆಕ್ಸ್ ಆದ್ರೂ ತಿನ್ನಿ, ಆದರೆ ನೀರಿನ ಮಹತ್ವವನ್ನು ಅರ್ಥಮಾಡಿಕೊಳ್ಳಿ ಎಂದು ಹೇಳಿದ್ದಾರೆ.

ಅಂದಹಾಗೆ, ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಈ ರೀತಿಯ ವಿಚಿತ್ರ ಹೇಳಿಕೆಗಳನ್ನು ನೀಡಿ ವಿವಾದಕ್ಕೀಡಾಗಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ಅವರು ಬಾಲಕಿಯರ ಶಾಲೆಯ ಶೌಚಾಲಯದ ಅನೈರ್ಮಲ್ಯವನ್ನು ಗಮನಿಸಿ ಅದನ್ನು ಬರಿಗೈಯಲ್ಲಿ ಸ್ವಚ್ಛಗೊಳಿಸುತ್ತಿದ್ದ ವಿಡಿಯೋವೊಂದು ವೈರಲ್ ಆಗಿತ್ತು.