ಗುರುತಿನ ಚೀಟಿಗಾಗಿ ಮೈಮೇಲೆ ಚರಂಡಿ ನೀರು ಸುರಿದುಕೊಂಡು ಸಫಾಯಿ ಕರ್ಮಚಾರಿಗಳ ಪ್ರತಿಭಟನೆ…

77
firstsuddi

ರಾಯಚೂರು : ಗುರುತಿನ ಚೀಟಿಗಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಮೈಮೇಲೆ ಚರಂಡಿ ನೀರು ಸುರಿದುಕೊಂಡು ಸಫಾಯಿ ಕರ್ಮಚಾರಿಗಳು ಪ್ರತಿಭಟನೆ ನಡೆಸಿದ್ದಾರೆ.

ಸಫಾಯಿ ಕರ್ಮಚಾರಿ ಗೀತಾ ಸಿಂಗ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಗುರುತಿನ ಚೀಟಿ ಇಲ್ಲದಿದ್ದರಿಂದ ಎಲ್ಲಾ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿ ಪೊಲೀಸರ ಮುಂದೆ ಚರಂಡಿ ನೀರು ಸುರಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ.

ಸಫಾಯಿ ಕರ್ಮಚಾರಿಗಳ ಸಭೆ ಕರೆದು ಕುಂದು ಕೊರತೆ ಆಲಿಸಿದ ಜಿಲ್ಲಾಧಿಕಾರಿ ಬಿ.ಸಿ.ಸತೀಶ್ ಅವರು, 80 ಜನರಿಗೆ ಗುರುತಿನ ಚೀಟಿ ನೀಡುವ ಕುರಿತು ವಿಶೇಷ ವರದಿ ನೀಡಲು ನಗರಾಭಿವೃದ್ದಿ ಯೋಜನಾಧಿಕಾರಿಗೆ ಡಿಸಿ ಖಡಕ್ ಸೂಚನೆ ನೀಡಿದರು. ಜೊತಗೆ ತಕ್ಷಣ ಗುರುತಿನ ಚೀಟಿ ನೀಡುವುದಾಗಿ ಭರವಸೆ ನೀಡಿದ್ದಾರೆ.