ಗುಲಾಮಗಿರಿಯ ಸಂಕೇತಕ್ಕೆ ತಿಲಾಂಜಲಿ – ನೌಕಾಪಡೆಯ ಹೊಸ ಧ್ವಜ ಅನಾವರಣ…

61
firstsuddi

ತಿರುವನಂತಪುರಂ : ಕೇರಳದ ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಕ್ರಾಂತ್ ಅನ್ನು ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆ ಮಾಡಿದ್ದಾರೆ. ಈ ವೇಳೆ, ನೌಕಾಪಡೆಯ ಹೊಸ ಧ್ವಜವನ್ನು ಅವರು ಅನಾವರಣಗೊಳಿಸಿದರು.

ಗುಲಾಮಗಿರಿಯ ಸಂಕೇತ, ವಸಾಹತುಶಾಹಿಯ ಕುರುಹುಗಳನ್ನು ತೆಗೆದುಹಾಕಲು ನೌಕಾಪಡೆ ಲಾಂಛನವನ್ನು ಬದಲಾವಣೆ ಮಾಡಲಾಗಿದೆ. ಭಾರತೀಯ ಕಡಲ ಪರಂಪರೆಗೆ ಅನುಗುಣವಾಗಿ ಈ ನೌಕಾಧ್ವಜ ನಿರ್ಮಾಣಗೊಂಡಿದ್ದು, `ನಿಶಾನ್’ ಎಂದು ಹೆಸರಿಡಲಾಗಿದೆ. ಇದು ರಕ್ಷಣಾ ವಲಯದಲ್ಲಿ ಆತ್ಮ ನಿರ್ಭರಕ್ಕೆ ಮತ್ತಷ್ಟು ಪುಷ್ಠಿ ನೀಡುವ ಉದ್ದೇಶವನ್ನೂ ಹೊಂದಿದೆ.

ಈ ಹಿಂದಿನ ಧ್ವಜವು ಬಿಳಿಯ ಬಣ್ಣದಲ್ಲಿದ್ದು, ಲಂಬ ಮತ್ತು ಅಡ್ಡವಾಗಿ ಕೆಂಪು ಪಟ್ಟಿಗಳನ್ನು ಒಳಗೊಂಡಿತ್ತು. ಅದನ್ನು ಸೇಂಟ್ ಜಾರ್ಜ್ ಕ್ರಾಸ್ ಎಂದು ಕರೆಯಲಾಗುತ್ತಿತ್ತು. ಇದೀಗ ಸೇಂಟ್ ಜಾರ್ಜ್ ಶಿಲುಬೆಯನ್ನ ಹೊಸ ಭಾರತೀಯ ನೌಕಾ ಧ್ವಜದಿಂದ ತೆಗೆದುಹಾಕಲಾಗಿದೆ.

ಹೊಸ ಧ್ವಜವು ಅಶೋಕ್ ಚಿಹ್ನೆ ಹೊಂದಿದ್ದು, ಅದರ ಕೆಳಗೆ ಸತ್ಯಮೇಯ ಜಯತೇ ಎಂದು ಬರೆಯಲಾಗಿದೆ. ಅಲ್ಲದೆ, ಮೇಲಿನ ಮೂಲೆಯಲ್ಲಿ ತ್ರಿವರ್ಣವಿದೆ. ಇದರ ಅಷ್ಟಭುಜಾಕೃತಿಯು 8 ದಿಕ್ಕುಗಳನ್ನು ಸೂಚಿಸುತ್ತದೆ. ಜೊತೆಗೆ ಶಿವಾಜಿಯ ರಾಜಮುದ್ರೆಯನ್ನೂ ಪರಿಚಯಿಸುತ್ತದೆ.