ಕಲಬುರಗಿ : ಖಾಸಗಿ ಬಸ್ ಹಾಗೂ ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿಯಾಗಿ ಬಳಿಕ ಬಸ್ ಹೊತ್ತಿ ಉರಿದ ಪರಿಣಾಮ 6ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿರುವ ಶಂಕೆ ವ್ಯಕ್ತವಾಗಿದೆ.
ಬೀದರ್-ಶ್ರೀರಂಗ ಪಟ್ಟಣ ಹೆದ್ದಾರಿ ಕಮಲಾಪುರ ಹೊರವಲಯದಲ್ಲಿ ಬೆಳಗ್ಗೆ 6.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಚಾಲಕ ಸೇರಿ ಬಸ್ ನಲ್ಲಿ ಸುಮಾರು 35 ಜನರಿದ್ದರು ಎಂದು ಅಂದಾಜಿಸಲಾಗಿದೆ. 12 ಜನರನ್ನು ರಕ್ಷಣೆ ಮಾಡಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸುಮಾರು 6ಕ್ಕೂ ಅಧಿಕ ಜನರು ಸಜೀವ ದಹನವಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಬಸ್ ಗೋವಾದಿಂದ ಹೈದ್ರಾಬಾದ್ ಗೆ ತೆರಳುತ್ತಿತ್ತು.
ಡಿಕ್ಕಿ ರಭಸಕ್ಕೆ ಸೇತುವೆ ಮೇಲಿಂದ ಕೆಳಗೆ ಉರಳುಬಿದ್ದ ಪರಿಣಾಮ ಡೀಸೆಲ್ ಟ್ಯಾಂಕರ್ ಡ್ಯಾಮೇಜ್ ನಿಂದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ.










