ಗೃಹಲಕ್ಷ್ಮೀ ಹಣ ತರಲು ಬ್ಯಾಂಕ್‍ಗೆ ಹೋಗಿದ್ದ ಪತ್ನಿಯನ್ನು ಕೊಂದ ಪತಿ.

36

ದಾವಣಗೆರೆ: ಕಾಂಗ್ರೇಸ್ ಸರ್ಕಾರ ಮಹಿಳೆಯರಿಗಾಗಿ ಬಿಡುಗಡೆ ಮಾಡಿರುವ ಗೃಹಲಕ್ಷ್ಮೀ ಯೋಜನೆಯ ಹಣ ಡ್ರಾ ಮಾಡಿಕೊಂಡು ಬರಲು ಬ್ಯಾಂಕ್‍ಗೆ ಹೋಗಿದ್ದ ಪತ್ನಿಯನ್ನು ಪತಿ ಕೊಲೆ ಮಾಡಿರುವ  ಘಟನೆ ದಾವಣಗೆರೆ ಜಗಳೂರು ತಾಲೂಕಿನ ಉಜ್ಜಪ್ಪರ ಒಡೆರಹಳ್ಳಿ ಗ್ರಾಮದಲ್ಲಿ ನಡೆದಿದೆ. ತನ್ನ ಪತ್ನಿ ಸತ್ಯಮ್ಮಳನ್ನು ಉಸಿರುಗಟ್ಟಿಸಿ ಕೊಲೆಮಾಡಿ ಪತಿ ಅಣ್ಣಪ್ಪ ನಾಪತ್ತೆಯಾಗಿದ್ದಾನೆ. ಇ ದಂಪತಿ ಪ್ರೀತಿಸಿ ಮದುವೆ ಆಗಿದ್ದರು. ಇ ದಂಪತಿಗೆ ಒಂದು ಹೆಣ್ಣು, ಒಂದು ಗಂಡು ಸೇರಿ ಇಬ್ಬರು ಮಕ್ಕಳು ಇದ್ದಾರೆ. ಸತ್ಯಮ್ಮಳ ಪತಿ ಪ್ರತಿದಿನ ಕುಡಿದುಬಂದು ಸತ್ಯಮ್ಮರಿಗೆ ಹಣ ಕೋಡುವುದಾಗಿ ಹಿಂಸೆ ನೀಡುತ್ತಿದ್ದನು. ತನ್ನ ಪತಿಯ ಈ ವರ್ತನೆಯಿಂದ ಬೇಸತ್ತ ಸತ್ಯಮ್ಮ ತನ್ನ ತವರು ಮನೆಗೆ ಹೋಗಿದ್ದರು. ಆದರೆ ಗೃಹ ಲಕ್ಷ್ಮಿ ಹಣ ಡ್ರಾ ಮಾಡಿಕೊಳ್ಳಲು ಒಡೆರಹಳ್ಳಿ ಗ್ರಾಮಕ್ಕೆ ಬಂದಿದ್ದಳು. ಈ ಸಮಯದಲ್ಲಿ ಪತಿ ಅಣ್ಣಪ್ಪ ಸತ್ಯಮ್ಮಳನ್ನು ಕೊಲೆ ಮಾಡಿದ್ದಾನೆ.
ಗೃಹಲಕ್ಷ್ಮೀ ಯೋಜನೆ ಹಣ ಡ್ರಾ ಮಾಡಲು ಸತ್ಯಮ್ಮ ಮಂಗಳವಾರ ಜಗಳೂರು ತಾಲೂಕಿನ ಅಸಗೋಡ್ ಬ್ಯಾಂಕ್‍ಗೆ ಬಂದಿದ್ದರು. ಇದೇ ವೇಳೆ ಬ್ಯಾಂಕ್‍ಗೆ ಬಂದ ಪತಿ ಅಣ್ಣಪ್ಪ ಪತ್ನಿ ಸತ್ಯಮ್ಮಳನ್ನ ಮನವೊಲಿಸಿ ಜಮೀನಿಗೆ ಕರೆದೊಯ್ದು ಅವಳ ಮೇಲೆ ಹಲ್ಲೆಮಾಡಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.