ಗೌರಿ ಲಂಕೇಶ್ ಹತ್ಯೆ ಪ್ರಕರಣ- ತಲೆಮರೆಸಿಕೊಂಡಿದ್ದ ಆರೋಪಿಯನ್ನು ಜಾರ್ಖಂಡ್‍ನಲ್ಲಿ ಬಂದಿಸಿದ ಪೊಲೀಸರು…

182
firstsuddi

ಬೆಂಗಳೂರು : ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ತಪ್ಪಿಸಿಕೊಂಡಿದ್ದ ಮತ್ತೋರ್ವ ಆರೋಪಿಯನ್ನು ಕರ್ನಾಟದ ಎಸ್‍ಐಟಿ ಪೊಲೀಸರು ಜಾರ್ಖಂಡ್‍ನಲ್ಲಿ ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ದೇವ್ಡೇಕರ್ @ ಮುರಳಿ(44) ಬಂಧಿತ ಆರೋಪಿ ಎಂದು ಗುರುತಿಸಲಾಗಿದ್ದು, ಕೃತ್ಯ ನಡೆದು ಎರಡೂ ವರ್ಷದ ಬಳಿಕ ಆರೋಪಿ ಪೊಲೀಸರ ಬಿದ್ದಿದ್ದಾರೆ. ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಕ್ಕೆ ಬಳಸಿದ್ದ ಪಿಸ್ತೂಲ್‍ನ್ನು ನಾಶಗೊಳಿಸುವಲ್ಲಿ ಆರೋಪಿ ಮುರಳಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದ್ದು, ಆರೋಪಿ ಮುರಳಿ ಜಾರ್ಖಾಂಡ್ ರಾಜ್ಯದ ಧನಬಾದ್ ಜಿಲ್ಲೆಯ ಕತ್ರಾಸ್ ಬಳಿ ಇದ್ದಾರೆ ಎಂಬ ಖಚಿತ ಮಾಹಿತಿಯನ್ನು ತಿಳಿದ ಪೊಲೀಸರು ಗುರುವಾರ ಸಂಜೆ ಆತನನ್ನು ಬಂಧಿಸಿದ್ದು, ಇಂದು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗುತ್ತದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.