ಮೂಡಿಗೆರೆ: ಕಾಂಗ್ರೇಸ್ನ ಹಿಂದೂ ವಿರೋದಿ ನೀತಿ ಮತ್ತು ಅಲ್ಪಸಂಖ್ಯಾತರ ತುಷ್ಠಿಕರಣ ದಾಳಿಕೋರರು ಭಯೋತ್ಪಾದಕರ ವ್ಯೆಭವಿಕರಣವನ್ನು ಬಾರತೀಯರು ಅರಿಯ ತೊಡಗಿದ್ದರಿಂದಲೇ ವಿದೇಶಿ ಬ್ರಿಟೀಷ್ ನಿರ್ಮಿತ ಕಾಂಗ್ರೇಸ್ ಪಕ್ಷ ದೇಶದಲ್ಲಿ ಮರೆಯಾಗುತ್ತಿದ್ದು ರಾಜ್ಯದಲ್ಲೂ ನಾಮಾವಶೇಷಗೊಳ್ಳಲಿದೆ ಎಂದು ಬಿಜೆಪಿ ತಾಲೂಕು ಅದ್ಯಕ್ಷ ರಘು ಜೆಎಸ್ ತಿಳಿಸಿದ್ಧಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಠ್ಯ ಪುಸ್ತಕ ಸಮಿತಿ ಅದ್ಯಕ್ಷ ರೋಹಿತ್ ಚಕ್ರವರ್ತಿ ಇವರು ಬರಗೂರು ರಾಮಚಂದ್ರ ಸೇರಿದಂತೆ ಭಾರತದ ಎಡಚೂರು ಕಾಂಗ್ರೆಸ್ ಕುಮ್ಮಕ್ಕಿನಿಂದ ಇತಿಹಾಸ ತಿರುಚಿ ಮಕ್ಕಳ ಮಾನಸಿಕತೆನ್ನೇ ಬದಲಿಸಿದ್ದು ದೇಶದ ದುರಂತ. ಅವರು ಸಾವಿರಾರು ವರ್ಷ ಇತಿಹಾಸ ಇರುವ ಸಾಂಸ್ಕೃತಿಕ, ಶ್ಯೆಕ್ಷಣಿಕ, ರಾಜಕೀಯ, ಕಲೆ, ವಾಸ್ತುಶಿಲ್ಪ ಸೇರಿದಂತೆ ಶ್ರೀಮಂತ ಸನಾತನ ಭಾರತವನ್ನು ಪರಿಚಯಿಸುವ ಬದಲು, ದಾಳಿಕೋರ ಹಿಂದೂ ನರಹಂತಕರಾದ ಘಜನಿ, ಘೋರಿ, ಬಾಬರ್, ಅಕ್ಬರ್, ಹುಮಾಯುನ್ ತನ್ನ ತಂದೆಯನ್ನೆ ಜ್ಯೆಲಿಗಟ್ಟಿದ. ಸಿಕ್ಕರ ಗುರು, ಸ್ವಂತ ಅಣ್ಣ ಕೋಟಿ ಹಿಂದುಗಳ ಹಂತಕ 30,000 ದೇವಾಲಯ ನಾಶ ಮಾಡಿದ ಔರಂಗಜೇಬ ಮತ್ತು ಟಿಪ್ಪುವನ್ನು ಪಠ್ಯಗಳಲ್ಲಿ ಜಾತ್ಯಾತೀತರನ್ನಾಗಿಸಿದ್ದು.
ಕುವೆಂಪು ಬಸವಣ್ಣ. ಕೆಂಪೆಗೌಡ. ಅಂಬೇಡ್ಕರ್. ಮ್ಯೆಸೂರು ಅರಸರನ್ನು ಅವಮಾನ ಮಾಡಿದ್ದು ನಿಮ್ಮ ಕಾಂಗ್ರೆಸ್ ಸಾದನೆ. ಈ ಎಲ್ಲಾ ತಪ್ಪುಗಳನ್ನೆ ರೋಹಿತ್ ಚಕ್ರತೀರ್ಥ ಸಮಿತಿ ಬದಲಿಸಲು ಹೊರಟಿದ್ದು. ಇದನ್ನು ವಿರೋದಿಸುತ್ತಿರುವ ಅವರ ಪ್ರತಿಕೃತಿ ಸುಡುತ್ತಿರುವ ನಿಮ್ಮ ಸಂತತಿಗಳೆ ಅಂದು ತುರ್ಕರ ದಾಳಿಗಳು. ಬ್ರೀಟಿಷರು, ಮೊಗಲರು, ಡಚ್ಚರು, ಪ್ರೆಂಚರು, ನಾವಾಬರು, ಬಹುಮನಿಗಳು, ಟಿಪ್ಪು, ಹೈದರ್ ಆಳ್ವಿಕೆಗೆ ಕಾರಣಿಕರ್ತರು. ಮತ್ತೆ ಅದನ್ನೆ ನೀವುಗಳು ಮುಂದುವರಿಸುತ್ತಿದ್ದೀರಿ.
ಅಷ್ಟಕ್ಕು ರಾಜ್ಯದ ಜನರ ಅಭಿವೃದ್ಧಿ. ಸಂಕಷ್ಟ ನಿರ್ವಹಣೆ. ರೂಪುರೇಷಗಳ ರಚನೆಗೆ ರಾಜ್ಯದ ಜನ ಬಿಜೆಪಿಗೆ ಅಧಿಕಾರ ಕೊಟ್ಟಿದ್ದು ಬೆಂಕಿ ಹಾಕುವುದು ಬಿಟ್ಟು. ನೀವುಗಳು ಹಿಂದುಗಳಿಗೆ ಮತ್ತು ಭಾರತೀಯರಿಗೆ ಮಾಡಿದ ಮೋಸ ಸರಿಪಡಿಸಿಕೊಳ್ಳಿ ಎಂದು ತಿಳಿಸಿದ್ದಾರೆ.










