ಚಾಲಕನನ್ನು ವರ್ಗಾವಣೆಗೊಳಿಸಿದ್ದ ಐಎಎಸ್ ಅಧಿಕಾರಿಗೆ ಬೆದರಿಕೆ – ಆರೋಪಿ ಅರೆಸ್ಟ್…

62
firstsuddi

ಬೆಂಗಳೂರು : ಚಾಲಕನನ್ನು ವರ್ಗಾವಣೆಗೊಳಿಸಿದ್ದ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರಿಗೆ ಬೆದರಿಕೆ ಹಾಕಿದ್ದ ಆರೋಪಿಯನ್ನ ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಗೋವಿಂದರಾಜು ಬಂಧಿತ ಆರೋಪಿ. ಸರ್ವೇ ಸೆಟಲ್ಮೆಂಟ್ ಹಾಗೂ ಲ್ಯಾಂಡ್ ರೆಕಾರ್ಡ್ಸ್ ಕಮಿಷನರ್ ಆಗಿರುವ ಮುನೀಶ್ ಮೌದ್ಗಿಲ್ ಅವರು ಇತ್ತೀಚಿಗೆ ಆಡಳಿತಾತ್ಮಕ ಕಾರಣಗಳಿಗಾಗಿ ತಮ್ಮ ಚಾಲಕ ಆನಂದ್ ಎಂಬುವವರನ್ನು ಕೋಲಾರಕ್ಕೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದರು.

ಅದೇ ದಿನ ರಾತ್ರಿ ಮುನೀಶ್ ಅವರಿಗೆ ಕರೆ ಮಾಡಿ ತಾನು ಅಬಕಾರಿ ಸಚಿವ ಗೋಪಾಲಯ್ಯನವರ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡ ಆರೋಪಿ, ಆನಂದ್ ರನ್ನು ಯಾಕೆ ವರ್ಗಾವಣೆ ಮಾಡಿದ್ದೀರಿ?, ತಕ್ಷಣವೇ ವರ್ಗಾವಣೆ ಆದೇಶ ರದ್ದು ಮಾಡಿ ಎಂದು ಏರು ಧ್ವನಿಯಲ್ಲಿ ಮಾತನಾಡಿದ್ದರಂತೆ. ಈ ಕುರಿತು ಮುನೀಶ್ ಮೌದ್ಗಿಲ್ ಅವರು ಗೋಪಾಲಯ್ಯನವರ ಆಪ್ತ ಕಾರ್ಯದರ್ಶಿ ರಾಮೇಗೌಡರಿಗೆ ಮಾಹಿತಿ ತಿಳಿಸಿ ಬಳಿಕ ಸಂಪಿಗೆಹಳ್ಳಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಗೋವಿಂದರಾಜು ಅವರನ್ನು ಬಂಧಿಸಿದ್ದಾರೆ.