ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ಒಡೆಯ” ಚಿತ್ರದ ಟೀಸರ್ ಬಿಡುಗಡೆ…

270

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ಒಡೆಯ” ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಶುಭಾರಂಭವನ್ನು ಕಂಡಿದೆ. ಎಂ.ಡಿ. ಶ್ರೀಧರ್ ಅವರು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ದರ್ಶನ್ ಅವರು ಗಜೇಂದ್ರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, “ನಾನು ಅಧಿಕಾರದ ಆಸೆಯಿಂದ ಬಂದಿಲ್ಲ. ಅಧಿಕಾರನೇ ಆಸೆ ಪಟ್ಟು ನನ್ನನ್ನು ಇಲ್ಲಿಗೆ ಕರೆಸಿಕೊಂಡಿದೆ. ಇನ್ಮುಂದೆ ಅಧಿಕಾರನೂ ನಂದೆನೇ, ಆಜ್ಞೆಯೂ ನಂದೆನೇ” ಎಂಬ ಡೈಲಾಗ್ ಮೂಲಕ ಟೀಸರ್ ಆರಂಭವಾಗಿದೆ. ಈ ಚಿತ್ರವನ್ನು ಎನ್ ಸಂದೇಶ್ ಅವರು ನಿರ್ಮಾಣ ಮಾಡುತ್ತಿದ್ದಾರೆ.