ಚಿಕ್ಕಬಳ್ಳಾಪುರ ಆದಿಯೋಗಿ ಶಿವನ ದರ್ಶನ ಪಡೆದ ರಜನಿಕಾಂತ್.

79
firstsuddi

ಚಿಕ್ಕಬಳ್ಳಾಪುರದಲ್ಲಿ ನಿರ್ಮಾಣವಾದ ಆದಿಯೋಗಿ ಶಿವನ ದರ್ಶನ ಪಡೆಯಲು ಸದ್ದಿಲ್ಲದೇ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ನಿನ್ನೆ ಸಂಜೆ ಭೇಟಿ ನೀಡಿದ್ದರು. ತಮ್ಮ ಸಹೋದರನ ಜೊತೆ ಭೇಟಿ ಕೊಟ್ಟ ನಟ ಆದಿಯೋಗಿ ಶಿವನ ದರ್ಶನ ಪಡೆದಿದ್ದಾರೆ.

ಮೂರು ದಿನಗಳ ಶೂಟಿಂಗ್ ಗಾಗಿ ರಜನಿಕಾಂತ್ ಮಂಗಳೂರಿಗೆ ಬಂದಿಳಿದಿದ್ದರು. ಮಂಗಳೂರಿನ ಶೂಟಿಂಗ್ ಮುಗಿಸಿಕೊಂಡು ಅವರು ನೇರವಾಗಿ ಬೆಂಗಳೂರಿಗೆ ಬಂದಿದ್ದಾರೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಆವಲಗುರ್ಕಿ ಗ್ರಾಮದ ಬಳಿ ಇರುವ ಆದಿಯೋಗಿಯ ದರ್ಶನ ಪಡೆದು ವಾಪಸ್ಸಾಗಿದ್ದಾರೆ. ಅನಿರೀಕ್ಷಿತ ಭೇಟಿಯಲ್ಲಿ ರಜನಿಕಾಂತ್ ಕಂಡ ಅವರ ಅಭಿಮಾನಿಗಳು ಪುಳಕಗೊಂಡಿದ್ದಾರೆ.

ಇಶಾ ಕೇಂದ್ರದ ಸದ್ಗುರು ಜಗ್ಗಿ ವಾಸುದೇವ್ ಅವರು ತಮಿಳುನಾಡಿನ ಕೊಯಮತ್ತೂರು ಬಳಿ ಸ್ಥಾಪಿಸಿರುವ ಆದಿಯೋಗಿ ಮಾದರಿಯಲ್ಲಿ ಕರ್ನಾಟಕದ ಚಿಕ್ಕಬಳ್ಳಾಪುರ ಬಳಿ 112 ಎತ್ತರದ ಆದಿಯೋಗಿ ಪ್ರತಿಮೆ ಇದೆ. ಪ್ರತಿಮೆಯನ್ನು ಆಂಧ್ರ ಮತ್ತು ಕರ್ನಾಟಕದವರಿಗೆ ಪ್ರವಾಸಿ ತಾಣವಾಗಿ ರೂಪುಗೊಂಡಿದೆ. ಮಕರ ಸಂಕ್ರಾಂತಿ ಹಬ್ಬದ ದಿನ ಚಿಕ್ಕಬಳ್ಳಾಪುರ ಬಳಿ ಆವಲಗುರ್ಕಿ ಸಮೀಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಈ ಪ್ರತಿಮೆ ಲೋಕಾರ್ಪಣೆಗೊಂಡಿದೆ.