ವಿಷ ಸೇವಿಸಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣು…

95
firstsuddi

ಯಾದಗಿರಿ: ವಿಷ ಸೇವಿಸಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಹುರುಸಗುಂಡಗಿ ಗ್ರಾಮದಲ್ಲಿ ನಡೆದಿದೆ.

ಶಹಾಪುರದ ಹುರುಸಗುಂಡಗಿ ಗ್ರಾಮದವರಾದ ಸುವರ್ಣ (20) ಮತ್ತು ಈಶಪ್ಪ (22) ಆತ್ಮಹತ್ಯೆ ಮಾಡಿಕೊಂಡವರು. ಇವರಿಬ್ಬರು ಕಳೆದ 5 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ 2 ವರ್ಷದ ಹಿಂದೆ ಸುವರ್ಣ ಬೇರೆಯವನನ್ನು ಮದುವೆಯಾಗಿ ಬೆಂಗಳೂರಿನಲ್ಲಿ ತನ್ನ ಗಂಡನ ಜೊತೆ ವಾಸವಾಗಿದ್ದಳು.

ಸುವರ್ಣ ನಿನ್ನೆ ಪತಿಗೆ ತಿಳಿಸದೇ ಹುರುಸಗುಂಡಗಿ ಗ್ರಾಮಕ್ಕೆ ಬಂದಿದ್ದಳು. ಇಂದು ಬೆಳಿಗ್ಗೆ ವಿಷ ಸೇವಿಸಿ ಸುವರ್ಣ ಮತ್ತು ಈಶಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭೀಮರಾಯನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.