ಚಿಕ್ಕಮಗಳೂರು : ಇಪ್ಪತ್ತೆಂಟು ತೋಟದ ಕಾರ್ಮಿಕರಿಗೆ ಕೊರೊನಾ ಪಾಸಿಟಿವ್..!

424
firstsuddi

ಚಿಕ್ಕಮಗಳೂರು : ನಗರ ಹಾಗೂ ಪಟ್ಟಣದಲ್ಲಿದ್ದ ಕೊರೊನಾ ಹೆಮ್ಮಾರಿ ಈಗ ಹಳ್ಳಿ ಹಳ್ಳಿಗೂ ವ್ಯಾಪಿಸಿದೆ. ತಾಲ್ಲೂಕಿನ ಉಳುವಾಗಿಲು ಗ್ರಾಮದ ಹತ್ತೊಂಬತ್ತು ಕುಟುಂಬದ ಇಪ್ಪತ್ತೆಂಟು ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಇಪ್ಪತ್ತೆಂಟು ತೋಟದ ಕಾರ್ಮಿಕರಿಗೆ ಕೊರೊನಾ ಪಾಸಿಟಿವ್ ಬಂದಿರುವುದು ಮಲೆನಾಡಿನ ಗ್ರಾಮೀಣ ಪ್ರದೇಶದಲ್ಲಿ ಆತಂಕ ಹೆಚ್ಚಾಗಿದೆ.

ಇಂದು ಚಿಕ್ಕಮಗಳೂರು ತಹಶೀಲ್ದಾರ್ ಕಾಂತ್ ರಾಜ್ ಹಾಗೂ ಶಾಸಕ ಎಂ.ಪಿ.ಕುಮಾರಸ್ವಾಮಿ ಭೇಟಿ ನೀಡಿ ಹಳ್ಳಿಯ ಪ್ರತಿ ಮನೆಗೂ ಒಂದು ತಿಂಗಳ ಆಹಾರದ ಕಿಟ್ ನೀಡಿ ಗ್ರಾಮಸ್ಥರಿಗೆ ಯಾರೂ ಮನೆಯಿಂದ ಹೊರ ಬರದಂತೆ ಮನವಿ ಮಾಡಿಕೊಂಡಿದ್ದು, ಆರೋಗ್ಯ ಸಿಬ್ಬಂದಿಗಳಿಗೆ ಪ್ರತಿದಿನ ಗ್ರಾಮಕ್ಕೆ ಭೇಟಿ ನೀಡುವಂತೆ ಸೂಚನೆ ನೀಡಿದ್ದಾರೆ.