ಚಿಕ್ಕಮಗಳೂರು : ಎಪಿಎಂಸಿ ಉಪಾಧ್ಯಕ್ಷರಾಗಿ ಸುಜಯ ಸುಬ್ರಾಯಗೌಡ ಅವಿರೋದ ಆಯ್ಕೆ…

398
firstsuddi

ಚಿಕ್ಕಮಗಳೂರು : ಎಪಿಎಂಸಿ ಉಪಾಧ್ಯಕ್ಷರಾಗಿ ಸುಜಯ ಸುಬ್ರಾಯಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಗರದ ಎಪಿಎಂಸಿ ಸಭಾಂಗಣದಲ್ಲಿ ಉಪಾಧ್ಯಕ್ಷ ಗಾದಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ನಂದಕುಮಾರ್, ಸುಜಯ ಸುಬ್ರಾಯಗೌಡ ಅವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.ನಂತರ ನಡೆದ ಸಮಾರಂಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಅರೇನಳ್ಳಿ ಪ್ರಕಾಶ್ ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿದರು. ಎಪಿಎಂಸಿ ಅಧ್ಯಕ್ಷ ಮಹೇಂದ್ರ, ನಿರ್ದೇಶಕರಾದ ರಾಜೀವ್ ಶಿವೇಗೌಡ, ಮಂಜುನಾಥ್, ಕವೀಶ್, ಕಾರ್ಯದರ್ಶಿ ಅಭಿನಂದನ್ ಹಾಜರಿದ್ದರು.