ಅಮೇರಿಕಾ : ಸ್ನೇಹಿತನನ್ನು ಉಳಿಸಲು ಜಲಪಾತಕ್ಕೆ ಧುಮುಕಿದ್ದ ಕರ್ನಾಟಕ ಮೂಲದ ಯುವಕ ಸಾವು…

457
firstsuddi

ಅಮೇರಿಕಾ : ಜಲಪಾತದಲ್ಲಿ ಸಿಲುಕಿದ್ದ ಸ್ನೇಹಿತನನ್ನು ರಕ್ಷಿಸಲು ಹೋಗಿ ಕರ್ನಾಟಕ ಮೂಲದ ಯುವಕ ಮೃತಪಟ್ಟಿರುವ ಘಟನೆ ಅಮೇರಿಕಾದ ಟರ್ನಲ್ ಫಾಲ್ಸ್ ನಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಶ್ರೀಪುರಂ ಜಂಕ್ಷನ್ ನಿವಾಸಿ ಅಜಯ್ ಕುಮಾರ್(24) ಮೃತ ಯುವಕ ಎನ್ನಲಾಗಿದ್ದು, ಅಜಯ್ ಅವರು ಅರ್ಲಿಂಗ್ಟನ್ ಟೆಕ್ಸಾಸ್ ಯುನಿವರ್ಸಿಟಿಯಲ್ಲಿ ಎಂ.ಎಸ್. ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ಅಜಯ್ ಅವರು ತಮ್ಮ ಸ್ನೇಹಿತರ ಜೊತೆ ಟರ್ನಲ್ ಫಾಲ್ಸ್ ವೀಕ್ಷಣೆ ಮಾಡಲು ತೆರಳಿದ್ದ ಸಂದರ್ಭದಲ್ಲಿ ಸ್ನೇಹಿತ ಕಾಲು ಜಾರಿ ಬಿದ್ದಿದ್ದು, ಸ್ನೇಹಿತನನ್ನು ರಕ್ಷಣೆ ಮಾಡಲು ಅಜಯ್ ಅವರು ಜಲಪಾತಕ್ಕೆ ಧುಮುಕಿದ್ದರು. ಈ ವೇಳೆ ಇಬ್ಬರೂ ಜಲಪಾತದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅಜಯ್ ಅವರ ಮೃತದೇಹ ಇಂದು ಅವರ ತವರೂರಿಗೆ ಬರಲಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.