ಚಿಕ್ಕಮಗಳೂರು : ಕವಿ ನಿಸಾರ್ ಅಹಮದ್ ಅವರು ನಿತ್ಯೋತ್ಸವ ಗೀತೆಗಳ ಮೂಲಕ ರಾಜ್ಯದ ಮನೆ ಮಾತಾಗಿದ್ದರು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಹೇಳಿದರು.
ನಗರದ ಸುವರ್ಣ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಕವಿ ನಿಸಾರ್ ಅಹಮದ್ ಅವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಉರ್ದು ಮಾತೃಭಾಷೆಯಾಗಿದ್ದರೂ ನಿಸಾರ್ ಅಹಮದ್ ಅವರ ಶುದ್ದವಾದ ಕನ್ನಡ, ಸಾಹಿತ್ಯ, ಬರಹ ಮತ್ತು ಕವಿತೆಗಳು ಅವರ ಪ್ರಬುದ್ದತೆಗೆ ಹಿಡಿದ ಕೈಗನ್ನಡಿಯಾಗಿವೆ ಎಂದರು.
ನಿಜ ಅರ್ಥದಲ್ಲಿ ಸಮನ್ವಯ ಕವಿಯಾಗಿದ್ದ ನಿಸಾರ್ ಅಹಮದ್ ಅವರ ನಿಧನದಿಂದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ಹೇಳಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ ನಿಸಾರ್ ಅಹಮದ್ ಅವರು ಹಿರಿಯ ಸಾಹಿತಿಯಾಗಿದ್ದರೂ ಅತ್ಯಂತ ಸರಳ ಮತ್ತು ಮೃದು ಸ್ವಭಾವದ ವ್ಯಕ್ತಿಯಾಗಿದ್ದರು ಎಂದರು.
ಮೃತರ ಅತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು, ಜಿಲ್ಲಾ ಕಸಾಪ ಖಜಾಂಚಿ ಪ್ರೊ|| ಕೆ.ಎನ್.ಲಕ್ಷ್ಮೀಕಾಂತ್, ತಾಲ್ಲೂಕು ಖಜಾಂಚಿ ಹೆಚ್.ಎಸ್.ಜಗದೀಶ್ ಹಾಜರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಕವಿ ನಿಸಾರ್ ಅಹಮದ್ ಅವರು ನಿತ್ಯೋತ್ಸವ ಗೀತೆಗಳ ಮೂಲಕ ರಾಜ್ಯದ ಮನೆ ಮಾತಾಗಿದ್ದರು...










