ಚಿಕ್ಕಮಗಳೂರು : ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ ನಲ್ಲಿ ಕಿಂಗ್ ಕೋಬ್ರಾ, ಕಾಳಿಂಗ ಸರ್ಪಗಳನ್ನು ನೋಡಿ ಅಬ್ಬಾ…. ಅಬ್ಬಾಬ್ಬ…. ಭಯಂಕರ, ಭಯಾನಕ ಅಂತಿದ್ದ ಜನಸಾಮಾನ್ಯರು ಕಾಫಿನಾಡಲ್ಲಿ ಸೆರೆ ಸಿಕ್ಕಿರುವ ಕಾಳಿಂಗನನ್ನು ನೋಡಿದರೆ ಒಂದು ಕ್ಷಣ ದಂಗಾಗ್ತೀರ. ಕಾಳಿಂಗನ ಉದ್ದ-ಗಾತ್ರ, ಅಬ್ಬರ-ಆರ್ಭಟ ನೋಡಿದರೆ ನಿಂತು ನೋಡುವವರಿಗೆ ಗುಂಡಿಗೆ ಬಾಯಿಗೆ ಬರುದತ್ತೆ. ಅಂತದ್ರಲ್ಲಿ ಅವನ ಅಬ್ಬರ-ಆರ್ಭಟದ ಮುಂದೆ ಅವನನ್ನು ತಣ್ಣಗೆ ಮಾಡಿ ಹಾವಾಡಿಗೆ ನೀರು ಕುಡಿಸುತ್ತಾನೆಂದರೆ ನಿಜಕ್ಕೂ ಅವನಿಗೆ ಎರಡು ಗುಂಡಿಗೆ ಇರಬೇಕು. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ತೆಕ್ಕೂರು ಗ್ರಾಮದ ಮಹೇಶ್ ಎಂಬುವರ ಕಾಫಿ ತೋಟದಲ್ಲಿ ಕಾಳಿಂಗ ಸರ್ಪವೊಂದು ಹದಿನೈದು ದಿನಗಳಿಂದ ನಿರಂತರವಾಗಿ ಕಾಣಿಸಿಕೊಳ್ಳುತ್ತಿತ್ತು. ಕಾಳಿಂಗನನ್ನು ಕಂಡ ಕೂಲಿ ಕಾರ್ಮಿಕರು ಕೆಲಸ ಮಾಡುವುದಕ್ಕೂ ಹಿಂದೇಟು ಹಾಕುತ್ತಿದ್ದರು. ತೋಟದ ಮಾಲೀಕ ಮಹೇಶ್ ಸ್ನೇಕ್ ಅರ್ಜುನ್ ಅವರನ್ನು ಕರೆಸಿ ಕಾಳಿಂಗನನ್ನು ಹಿಡಿಯುವುದಕ್ಕೆ ಮುಂದಾದರು. ಸ್ಥಳಕ್ಕೆ ಬಂದ ಸ್ನೇಕ್ ಅರ್ಜುನ್ ಸುಮಾರು ಒಂದು ಗಂಟೆಯ ಕಾರ್ಯಚರಣೆ ನಡೆಸಿ ಕಾಳಿಂಗನನ್ನು ಸೆರೆ ಹಿಡಿದಿದ್ದಾರೆ. ಆದರೆ, ಸೆರೆಯಾದ ಕಾಳಿಂಗನನ್ನು ಕಂಡು ಕೂಲಿ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಕಾಳಿಂಗನನ್ನು ಸೆರೆ ಹಿಡಿದ ಅರ್ಜುನ್ ಕಾಳಿಂಗನ ಮಗ್ಗಲಲ್ಲೇ ಕೂತು ನೀರು ಕುಡಿಸಿದ್ದಾನೆ. ಕಾಳಿಂಗ ಸರ್ಪ ಬಾಯಿ ಬಿಡೋದನ್ನು ನೋಡಿ ಕೂಲಿ ಕಾರ್ಮಿಕರೇ ಹೆದರುತ್ತಿದ್ದರು. ಆದರೆ, ಅರ್ಜುನ್ ಧೈರ್ಯಕ್ಕೆ ಭೇಷ್ ಅಂದಿದ್ದಾರೆ. ಕಾಳಿಂಗನನ್ನು ಸೆರೆ ಹಿಡಿದ ಅರ್ಜುನ್ ಅದನ್ನು ಸ್ಥಳಿಯ ಅರಣ್ಯಕ್ಕೆ ಬಿಟ್ಟಿದ್ದಾರೆ.
Home Breaking News ಚಿಕ್ಕಮಗಳೂರು : ಕಾಫಿನಾಡಲ್ಲಿ ಸೆರೆ ಸಿಕ್ಕಿರುವ ಕಾಳಿಂಗನನ್ನು ನೋಡಿದರೆ ಒಂದು ಕ್ಷಣ ದಂಗಾಗ್ತೀರ…!









