ಚಿಕ್ಕಮಗಳೂರು : ಕೊರೊನಾ ಭೀತಿ ಹಿನ್ನೆಲೆ, ವಿನಯ್ ಗುರೂಜಿ ಅವರ ಆಶ್ರಮದ ಮಾರ್ಗಕ್ಕೂ ಬೇಲಿ…

328

ಚಿಕ್ಕಮಗಳೂರು : ದೇಶಾದ್ಯಂತ ಕೊರೊನಾ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆ, ವಿನಯ್ ಗುರೂಜಿ ಆಶ್ರಮದ ಮಾರ್ಗಕ್ಕೂ ಬೇಲಿ ಹಾಕಿರುವ ಘಟನೆ ಜಿಲ್ಲೆಯ ಕೊಪ್ಪ ತಾಲ್ಲೂಕಿನ ನಂದಿಗೋಡು ಗ್ರಾಮದಲ್ಲಿ ನಡೆದಿದೆ. ಹರಿಪುರ ಸಮೀಪದ ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿ ಅವರ ಆಶ್ರಮಕ್ಕೆ ನಂದಿಗೋಡು ಗ್ರಾಮವನ್ನು ದಾಟಿಯೇ ಹೋಗಬೇಕಾಗಿದ್ದು, ಹೀಗಾಗಿ ಗ್ರಾಮಸ್ಥರು ಹೊರಗಿನವರು ಯಾರೂ ಬಾರದಂತೆ ಗ್ರಾಮಕ್ಕೆ ಬೇಲಿ ಹಾಕಿದ್ದಾರೆ.