ಚಿಕ್ಕಮಗಳೂರು : ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 159ನೇ ಜನ್ಮ ದಿನಾಚರಣೆ ಇಲ್ಲಿನ ಆದಿಶಕ್ತಿ ನಗರದ ಶ್ರೀ ಶಾರದ ಮಠದಲ್ಲಿ ಜ.25ರಂದು ನಡೆಯಲಿದೆ.
ಜನ್ಮದಿನದ ಅಂಗವಾಗಿ ಬೆಳಿಗ್ಗೆ 5ಗಂಟೆಗೆ ಮಂಗಳಾರತಿ, ಉಷಾ ಕೀರ್ತನೆ, ವಿಶೇಷ ಪೂಜೆ 10ಗಂಟೆಗೆ ಶಿವ ಸಹಸ್ರನಾಮ ಪಾರಾಯಣ ಜರುಗಲಿದೆ. 11ಗಂಟೆಗೆ ಹೋಮ, ಪ್ರವಚನ, ಭಕ್ತರಿಂದ ಭಜನೆ, ಮಧ್ಯಾಹ್ನ 1ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.
ಸಂಜೆ ಮಾಲಿನಿ ಮತ್ತು ತಂಡದಿಂದ ಭಜನೆ, ಸಂಧ್ಯಾರತಿ ಜರುಗಲಿದೆ ಎಂದು ಶ್ರೀ ಮಠದ ಅಧ್ಯಕ್ಷೆ ಶ್ರೀ ಪ್ರವ್ರಾಜಿಕ ಶುಭವ್ರತ ಪ್ರಾಣಾ ಮಾತಾಜಿ ತಿಳಿಸಿದ್ದಾರೆ.










