ಚಿಕ್ಕಮಗಳೂರು : ಡಿ.5 ರಂದು ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ವಾರ್ಷಿಕ ದತ್ತ ಜಯಂತಿ ಉತ್ಸವ…

246
firstsuddi

ಚಿಕ್ಕಮಗಳೂರು : ನಗರದ ಗೃಹ ಮಂಡಳಿ ಬಡಾವಣೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ವಾರ್ಷಿಕ ದತ್ತ ಜಯಂತಿ ಉತ್ಸವ ಡಿ.5 ರಂದು ನಡೆಯಲಿದೆ. ಉತ್ಸವದ ಅಂಗವಾಗಿ ಅಂದು ಬೆಳಿಗ್ಗೆ ಶ್ರೀ ಗುರು ದತ್ತಾತ್ರೇಯರ ವಿಗ್ರಹಕ್ಕೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ, ದತ್ತ ಹೋಮ ಜರುಗಲಿದೆ. ಮಧ್ಯಾಹ್ನ 1 ಗಂಟೆಗೆ ಮಹಾಮಂಗಳಾರತಿ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದ್ದು ಹೆಚ್ಚಿನ ಮಾಹಿತಿಗೆ 9980264991 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವಂತೆ ಮಂದಿರದ ಮುಖ್ಯ ಟ್ರಸ್ಟಿ ಜಿ.ಎನ್.ಆನಂದ ಸಾಯಿ ತಿಳಿಸಿದ್ದಾರೆ.