ಚಿಕ್ಕಮಗಳೂರು : ನಾರಾಯಣ ಗುರುಗಳನ್ನು ಅವಹೇಳನ ಮಾಡಿರುವ ರಾಮಚಂದ್ರ ಗುಹಾ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು : ಕೆ.ಟಿ.ರಾಧಾಕೃಷ್ಣ ಒತ್ತಾಯ…

115
firstsuddi

ಚಿಕ್ಕಮಗಳೂರು : ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣಗುರುಗಳನ್ನು ಅವಹೇಳನ ಮಾಡಿರುವ ಇಂಡಿಯಾ ಅಫ್ಟರ್ ಗಾಂಧಿ ಪುಸ್ತಕದ ಲೇಖಕ ರಾಮಚಂದ್ರ ಗುಹಾ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಒತ್ತಾಯಿಸಿದರು.
ನಗರದ ಬಿಎಸ್ಪಿ ಕಛೇರಿಯಲ್ಲಿ ಇಂದು ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಹ್ಮಶ್ರೀ ನಾರಾಯಣಗುರುಗಳು ಅಸ್ಪøಶ್ಯತೆ, ಅಸಮಾನತೆ ಮತ್ತು ಜಾತಿ ಪದ್ಧತಿ ವಿರುದ್ಧ ಹೋರಾಟ ನಡೆಸಿ ಕೆಳವರ್ಗದ ಜನರಿಗೆ ಗೌರವಯುತವಾಗಿ ಬಾಳಲು ಅನುವು ಮಾಡಿಕೊಟ್ಟ ಮಹಾತ್ಮರು. ಅಂತಹ ಸಮಾಜ ಸುಧಾರಕರನ್ನು ರಾಮಚಂದ್ರ ಗುಹಾ ಅವರು ತಮ್ಮ ಇಂಡಿಯಾ ಆಫ್ಟರ್ ಗಾಂಧಿ ಪುಸ್ತಕದಲ್ಲಿ ಹೆಂಡ ಇಳಿಸುವವರ ನಾಯಕರು ಎಂದು ಅವಹೇಳನ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ವಿಷಾಧಿಸಿದರು.

ಸಮಾಜ ಸುಧಾರಕರು ಮತ್ತು ಮಹಾತ್ಮರಿಗೆ ಅವಹೇಳನ ಮಾಡಿದ ಹಿನ್ನೆಲೆಯಲ್ಲಿ ರಾಮಚಂದ್ರ ಗುಹಾ ವಿರುದ್ಧ ಜಾತಿನಿಂದನೆ ಮೊಕದ್ದಮೆ ದಾಖಲಿಸಬೇಕು. ಅವರ ಇಂಡಿಯಾ ಆಫ್ಟರ್ ಗಾಂಧಿ ಪುಸ್ತಕವನ್ನು ತಕ್ಷಣ ಮುಟ್ಟುಗೋಲು ಹಾಕಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ ಮಾತನಾಡಿ ಜಾತಿ ಪದ್ಧತಿ, ಅಸ್ಪøಶ್ಯತೆ ಮತ್ತು ಅಸಮಾನತೆ ವಿರುದ್ಧ ಹೋರಾಟ ನಡೆಸಿದ ಮಹಾನ್ ಮಾನವತಾವಾದಿ ಬ್ರಹ್ಮಶ್ರೀ ನಾರಾಯಣಗುರುಗಳು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್ ಒಂದೇ ಜಾತಿ, ಒಂದೇ ದೇವರು, ಒಂದೇ ಧರ್ಮ ಎಂಬ ನಾರಾಯಣಗುರುಗಳ ಸಂದೇಶ ಸಾರ್ವಕಾಲಿಕ ಸತ್ಯ ಎಂದು ಹೇಳಿದರು.

ಬಿಎಸ್ಪಿ ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಖಜಾಂಚಿ ವಾಹೀದ್ ಜಾನ್, ಪಿ.ವಿ.ತಂಬನ್, ಕಿಟ್ಟು, ಸೋಮಶೇಖರ್, ರವಿ, ರಮೇಶ್, ಉಪನ್ಯಾಸಕ ಸುರೇಶ್ ಉಪಸ್ಥಿತರಿದ್ದರು.