ಚಿಕ್ಕಮಗಳೂರು : ನೇಣು ಬಿಗಿದುಕೊಂಡು ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಆಲ್ದೂರು ಸಮೀಪದ ಗುಲ್ಲನ್ ಪೇಟೆಯ ಸತ್ತಿಹಳ್ಳಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಮೃತ ಯುವಕನನ್ನು ತಾಲೂಕಿನ ಕಲ್ಲುಗುಡ್ಡೆ ಸಮೀಪದ ಆಣೂರಿನ ದರ್ಶನ್ ಹಾಗೂ ಯುವತಿಯನ್ನು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಾನ್ಬಾಳು ಮೂಲದ ಪೂರ್ವಿಕಾ ಎಂದು ಗುರುತಿಸಲಾಗಿದೆ. ಆದರೆ, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ದರ್ಶನ್ ಚಿಕ್ಕಮಗಳೂರಿನಲ್ಲಿದ್ದ, ಪೂರ್ವಿಕಾ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಳು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು, ಇಬ್ಬರು ಪ್ರೇಮಿಗಳಿರಬಹುದು ಎಂದು ಶಂಕಿಸಲಾಗಿದೆ. ವೇಲಿನ ಒಂದು ತುದಿಗೆ ಪೂರ್ವಿಕಾ ಕೊರಳೊಡ್ಡಿದ್ದರೆ, ಮತ್ತೊಂದು ತುದಿಗೆ ದರ್ಶನ್ ನೇಣು ಬಿಗಿದುಕೊಂಡಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಆಲ್ದೂರು ಪೊಲೀಸರು ಮೃತದೇಹವನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ. ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










