ಚಿಕ್ಕಮಗಳೂರು : ಭಾಗಮನೆ ಗ್ರೂಪ್ಸ್ ನಗರ ಹೊರವಲಯದ ಗಾಲ್ಫ್ ಕ್ಲಬ್ನಲ್ಲಿ ಆಯೋಜಿಸಿದ್ದ ಮೂರು ದಿನಗಳ ಕಾಲದ ಭಾಗಮನೆ ಕಪ್ 2019 ರಾಜ್ಯ ಮಟ್ಟದ ಐದನೇ ಗಾಲ್ಫ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ವಿಂಗ್ ಕಮಾಂಡರ್ ಜೋಗೇಂದರ್ ಸೆಹ್ರಾವತ್ ಪ್ರಥಮ ಸ್ಥಾನ ಗಳಿಸಿದರು.
ಬೆಂಗಳೂರಿನ ನಿಶಾಂತ್ ಕುಲಕರ್ಣಿ ದ್ವಿತೀಯ ಸ್ಥಾನ ಪಡೆದುಕೊಂಡರು, ಪಂದ್ಯಾವಳಿಯ ನಂತರ ಭಾನುವಾರ ನಡೆದ ವರ್ಣರಂಜಿತ ಸಮಾರಂಭದಲ್ಲಿ ಭಾಗಮನೆ ಗ್ರೂಪ್ಸ್ನ ಹಣಕಾಸು ವಿಭಾಗದ ವ್ಯವಸ್ಥಾಪಕ ಶ್ರವಣ್ ಮಹಿಪಾಲ್ ವಿಜೇತರಿಗೆ ಬಹುಮಾನ ವಿತರಿಸಿದರು.
ಸಮಗ್ರ ಪ್ರಶಸ್ತಿಗೆ ಪಾತ್ರರಾದ ವಿಂಗ್ ಕಮಾಂಡರ್ ಜೋಗೇಂದರ್ ಸೆಹ್ರಾವತ್ ಅವರಿಗೆ ಭಾಗಮನೆ ಟ್ರೋಫಿ ನೀಡಿ ಪುರಸ್ಕರಿಸಲಾಯಿತು, ಮೂರು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಬೆಂಗಳೂರು, ಮೈಸೂರು, ಶಿವಮೊಗ್ಗ, ಕೂರ್ಗ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 300ಕ್ಕೂ ಹೆಚ್ಚು ಸ್ಪರ್ಧಾಳುಗಳು ಪಾಲ್ಗೊಂಡಿದ್ದರು.
ಇದೇ ವೇಳೆ ಮಾತನಾಡಿದ ಭಾಗಮನೆ ಗ್ರೂಪ್ಸ್ನ ಹಣಕಾಸು ವಿಭಾಗದ ವ್ಯವಸ್ಥಾಪಕ ಶ್ರವಣ್ ಮಹಿಪಾಲ್ ಸಾರ್ವಜನಿಕರಲ್ಲಿ ಗಾಲ್ಫ್ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸುವ ಉದ್ದೇಶದಿಂದ ಕಳೆದ 5 ವರ್ಷಗಳಿಂದ ಗಾಲ್ಫ್ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪಂದ್ಯಾವಳಿಯ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು, ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ, ಜಿಲ್ಲಾ ಪೋಲಿಸ್ ಮುಖ್ಯಾಧಿಕಾರಿ ಹರೀಶ್ ಪಾಂಡೆ, ಐಪಿಎಸ್ ಅಧಿಕಾರಿ ಸಂತೋಷ್ ಬಾಬು, ಗಾಲ್ಫ್ ಕ್ಲಬ್ ಅಧ್ಯಕ್ಷ ಎ.ಬಿ.ಸುದರ್ಶನ್, ಕ್ಯಾಪ್ಟನ್ ರವಿಶಂಕರ್, ಖಜಾಂಚಿ ಎಸ್.ಆರ್.ಸತ್ಯನಾರಾಯಣ, ಕಾರ್ಯದರ್ಶಿ ಎ.ಎಸ್.ಶಂಕರೇಗೌಡ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಭಾಗಮನೆ ಕಪ್ 2019 ರಾಜ್ಯ ಮಟ್ಟದ ಗಾಲ್ಫ್ ಪಂದ್ಯಾವಳಿ-ಬೆಂಗಳೂರಿಗೆ ಸಮಗ್ರ ಪ್ರಶಸ್ತಿ…










