ಚಿಕ್ಕಮಗಳೂರು : ಶಬರಿಮಲೆಗೆ ಹೊರಟ ಪೊಲೀಸ್ ಪೇದೆ ನೀರಿನಲ್ಲಿ ಮುಳುಗಿ ಸಾವು…

296
firstsuddi

ಚಿಕ್ಕಮಗಳೂರು : ಶಬರಿಮಲೆಗೆ ಹೊರಟ ಪೊಲೀಸ್ ಪೇದೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮೈಸೂರಿನ ನಂಜನಗೂಡು ಸಮೀಪದ ಕಳಲೆ ನಾಲೆಯಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಜೋಡಿಲಿಂಗದಹಳ್ಳಿ ನಿವಾಸಿ ಚಿದಾನಂದ(30) ನಾಲೆಯಲ್ಲಿ ಮುಳುಗಿ ಸಾವನ್ನಪ್ಪಿದ ಪೇದೆ ಎಂದು ಗುರುತಿಸಲಾಗಿದೆ. ಚಿದಾನಂದ ಅವರು ಕಡೂರು ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದ್ದು, ಮಾಲಾಧಾರಣೆ ಮಾಡಿ ನಿನ್ನೆ ಶಬರಿಮಲೆಗೆ ಹೊರಟಿದ್ದರು. ಈ ವೇಳೆ ಕಳಲೆ ನಾಲೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಇಂದು ಚಿದಾನಂದಾ ಅವರ ಮೃತದೇಹ ಪತ್ತೆಯಾಗಿದ್ದು, ನಂಜನಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.