ಚಿಕ್ಕಮಗಳೂರು : ಮಾಂಸಕ್ಕಾಗಿ ಕ್ವಿಂಟಾಲ್ ತೂಕದ ಕಡವೆ ಬೇಟೆಯಾಡಿದ ದುಷ್ಕರ್ಮಿಗಳು…

1422
firstsuddi

ಚಿಕ್ಕಮಗಳೂರು : ಮಾಂಸಕ್ಕಾಗಿ ದುಷ್ಕರ್ಮಿಗಳು ಕ್ವಿಂಟಾಲ್ ತೂಕದ ಕಡವೆಯನ್ನು ಬೇಟೆಯಾಡಿರುವ ಘಟನೆ ಜಿಲ್ಲೆಯ ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿ ಬಳಿ ನಡೆದಿದೆ. ರಂಗೇನಹಳ್ಳಿ ಗ್ರಾಮದ ಯೋಗೇಶ್, ದಿನೇಶ್, ಆನಂದ್ ಹಾಗೂ ಶಾಂತ್‍ಕುಮಾರ್ ಎಂಬುವವರು ಹೊಗರೇಹಳ್ಳಿ ಬೆಟ್ಟದಲ್ಲಿ ಕಡವೆಯನ್ನು ಬೇಟೆಯಾಡಿ ಮಾಂಸ, ಚರ್ಮವನ್ನು ಬೇರ್ಪಡಿಸುತ್ತಿರುವ ವೇಳೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದು, ಕೂಡಲೇ ದುಷ್ಕರ್ಮಿಗಳು ಮಾಂಸ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದು, ಅರಣ್ಯಾಧಿಕಾರಿಗಳು 85 ಕೆ.ಜಿ ಮಾಂಸ, 4 ಕಾಲು, ಕೊಂಬು, ಚರ್ಮ ಹಾಗೂ ಬೊಲೆರೋ ವಾಹನವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಕಡೂರು ವಲಯ ಅರಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.