ಚಿಕ್ಕಮಗಳೂರು : ಮುಸ್ಲಿಂ ಸಮುದಾಯ ಧಾರ್ಮಿಕತೆಯನ್ನು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತಪ್ಪದೇ ಪಾಲಿಸಬೇಕು : ಎಸ್.ಪಿ.ಹಂಝ ಸಖಾಫಿ.

165
firstsuddi

ಚಿಕ್ಕಮಗಳೂರು : ತಾಲ್ಲೂಕಿನ ಮಾಗಡಿಯ ಇಂಪಾಲ್ ಸಭಾ ಭವನದಲ್ಲಿ ಜಿಲ್ಲಾ ಸಂಯುಕ್ತ ಜಮಾಅತ್ ಖಾಜಿ ಹಾಗೂ ಸುನ್ನಿ ಉಲಮಾ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದ್ ಅವರ ಪದಗ್ರಹಣ ಸಮಾರಂಭ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸುನ್ನಿ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್.ಪಿ.ಹಂಝ ಸಖಾಫಿ ಮುಸ್ಲಿಂ ಸಮುದಾಯ ಧಾರ್ಮಿಕತೆಯನ್ನು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತಪ್ಪದೇ ಪಾಲಿಸಬೇಕು ಎಂದು ಸಲಹೆ ಮಾಡಿದರು.
ಸುನ್ನಿ ಉಲಮಾ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಹುಸೈನ್ ಸಅದಿ ಮಾತನಾಡಿ ಧಾರ್ಮಿಕ ಚಟುವಟಿಕೆಗಳಿಂದ ಮಾತ್ರ ಆತ್ಮವಿಶ್ವಾಸ ಮೂಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಯೂಸೂಫ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಅಸ್ಸಯ್ಯಿದ್ ಝೈನುಲ್ ಅಬದೀನ್ ಜಮುಲುಲ್ಲೈಲಿ ತಂಙಳ್. ಅಬ್ದುಲ್ ಅಜೀಜ್ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಯು.ಕೆ.ಮಹಮದ್ ಸಅದಿ ರಾಜ್ಯ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಅಬು ಸುಫೀಯಾನ್ ಇಬ್ರಾಹಿಂ ಮದನಿ. ಎಸ್.ವೈ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ|| ಎಂ.ಎಸ್.ಎಂ ಝೈನಿಖಾಮಿಲ್ ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಅಬೂಬಕರ್, ಮುಫ್ತಿ ಅನ್ವರ್ ಹುಸೇನ್ ಸಾಬ್ ಉಪಸ್ಥಿತರಿದ್ದರು.
ಜಿಲ್ಲೆಯ 25 ಮೊಹಲ್ಲಾಗಳ ಆಡಳಿತ ಪ್ರತಿನಿಧಿಗಳು, ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಎನ್.ಕೆ.ಎಂ ಶಾಫಿ ಸಅದಿ, ಮುಸ್ಲಿಂ ಜಮಾಅತ್ ಜಿಲ್ಲಾಧ್ಯಕ್ಷ ಶಾಹಿದ್ ರಜ್ವಿ ಹಾಜರಿದ್ದರು.