ಚಿಕ್ಕಮಗಳೂರು : ಮೇರು ಗಾಯಕ ಡಾ|| ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಸಾಂಸ್ಕೃತಿಕ ಸಂಘ ತೀವ್ರ ಸಂತಾಪ…

153
firstsuddi

ಚಿಕ್ಕಮಗಳೂರು : ಚಲನಚಿತ್ರ ರಂಗದ ಮೇರು ಗಾಯಕ ಡಾ|| ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಸಾಂಸ್ಕೃತಿಕ ಸಂಘ ತೀವ್ರ ಸಂತಾಪ ಸೂಚಿಸಿದೆ.
ಕನ್ನಡ, ಹಿಂದಿ, ತಮಿಳು, ತೆಲುಗು, ತುಳು ಸೇರಿದಂತೆ ಹತ್ತು ಹಲವು ಭಾಷೆಗಳಲ್ಲಿ ನಲವತ್ತು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡುವುದರ ಜೊತೆಗೆ ಅಧ್ಬುತವಾಗಿ ಅಭಿನಯಿಸುತ್ತಿದ್ದ ಕರ್ನಾಟಕ ಮತ್ತು ಹಿಂದೂಸ್ತಾನಿ ಗಾಯನದಲ್ಲೂ ಸೈ ಎನಿಸಿಕೊಂಡಿದ್ದ ಎಸ್.ಪಿ.ಬಿ ಅವರ ನಿಧನದಿಂದ ದೇಶದ ಚಿತ್ರ ರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಂಘದ ಕಾರ್ಯದರ್ಶಿ ಉಜ್ವಲ್ ಡಿ.ಪಡುಬಿದ್ರಿ ಶೋಕಿಸಿದ್ದಾರೆ.