ಚಿಕ್ಕಮಗಳೂರು : ರಂಗಭೂಮಿಗಾಗಿ ಜ್ಞಾನಪೀಠ ಪಡೆದ ಮೊದಲ ಸಾಹಿತಿ ಡಾ|| ಗಿರೀಶ್ ಕಾರ್ನಾಡ್ : ರವೀಶ್ ಕ್ಯಾತನಬೀಡು.

356
firstsuddi

ಚಿಕ್ಕಮಗಳೂರು : ರಂಗಭೂಮಿಗಾಗಿ ಜ್ಞಾನಪೀಠ ಪಡೆದ ಮೊದಲ ಸಾಹಿತಿ ಡಾ|| ಗಿರೀಶ್ ಕಾರ್ನಾಡ್ ಎಂದು ಸಾಹಿತಿ ರವೀಶ್ ಕ್ಯಾತನಬೀಡು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನ ಕಳಸಾಪುರದ ಸರ್ಕಾರಿ ಪಿ.ಯು ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಜ್ಞಾನಪೀಠ ಪುರಸ್ಕøತರ ಬದುಕು-ಬರಹ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ|| ಗಿರೀಶ್ ಕಾರ್ನಾಡ್ ಕುರಿತು ಅವರು ಮಾತನಾಡಿದರು.
ಗಿರೀಶ್ ಕಾರ್ನಾಡರ ಬದುಕು ಮತ್ತು ಬರಹ ವಿಭಿನ್ನವಾಗಿತ್ತು, ಹತ್ತರೊಳಗೆ ಮತ್ತೊಂದು ಎಂಬಂತೆ ಅವರು ಬದುಕಲಿಲ್ಲ ಸದಾ ವಿಭಿನ್ನವಾಗಿ ಯೋಚಿಸುತ್ತಿದ್ದ ಕಾರ್ನಾಡರು ಮನುಷ್ಯರೊಳಗಿರಬಹುದಾದ ಮುಖವಾಡವನ್ನು ಕಳಚುವ ಕಾವ್ಯ ಮತ್ತು ನಾಟಕಗಳನ್ನು ಬರೆದವರು ಎಂದರು.
ಕಾರ್ನಾಡರಿಗೆ ಸಿನಿಮಾ ಅತ್ಯಂತ ಜನಪ್ರಿಯತೆಯನ್ನು ತಂದರೂ ರಂಗಭೂಮಿ ಮಾತ್ರ ಅವರ ಅಂತರಂಗದ ವಿಷಯವಾಗಿತ್ತು, ಸಮಾಜದಲ್ಲಿ ನಡೆಯುವ ಅನ್ಯಾಯ, ಶೋಷಣೆ ಮತ್ತು ದೌರ್ಜನ್ಯವನ್ನು ಪ್ರತಿಭಟಿಸುತ್ತಿದ್ದ ಅವರು ನಮ್ಮ ನಡುವೆ ನಡೆಯುವ ಸಂಗತಿಗಳಿಗೆ ವೈರುಧ್ಯಗಳಿಗೆ ತಮ್ಮ ನಾಟಕಗಳ ಮೂಲಕ ಉತ್ತರ ಹುಡುಕುತ್ತಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜು ಅಭಿವೃದ್ದಿ ಮಂಡಳಿ ಅಧ್ಯಕ್ಷ ದಿನೇಶ್ ಸಾಹಿತ್ಯದ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳು ಶಾಲಾ ಕಾಲೇಜುಗಳಲ್ಲಿ ನಿರಂತರವಾಗಿ ನಡೆದರೆ ವಿದ್ಯಾರ್ಥಿಗಳ ಜ್ಞಾನ ಹೆಚ್ಚುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಓದುವ ಹವ್ಯಾಸದಿಂದ ಬದುಕಿಗೆ ಓಟ ಮತ್ತು ನೋಟ ಸಿಗುತ್ತದೆ, ಸಾಹಿತ್ಯ ಮತ್ತು ಸಂಸ್ಕøತಿಯ ಸಂಗಮದಿಂದ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಹೇಳಿದರು.
ಉಪನ್ಯಾಸಕ ಡಾ|| ಹೆಚ್.ಎಸ್.ಸತ್ಯನಾರಾಯಣ ಗೀತಗಾಯನ ಮಾಡಿದರು, ಡಾ|| ಗಿರೀಶ್ ಕಾರ್ನಾಡ್ ಕುರಿತು ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ, ಸಂಘಟನಾ ಕಾರ್ಯದರ್ಶಿ ಚಂದ್ರಯ್ಯ, ಸುಗಂಧ ಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ಜಿ.ಬಿ.ಸುಕನ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು, ಪ್ರಾಚಾರ್ಯ ಹೆಚ್.ಎಂ.ನಾಗರಾಜ ರಾವ್ ಸ್ವಾಗತಿಸಿದರು, ಶಾಂತಕುಮಾರ್ ವಂದಿಸಿದರು.