ಚಿಕ್ಕಮಗಳೂರು:- ಚಿಕ್ಕಮಗಳೂರು ರೌಂಡ್
ಟೇಬಲ್ 23ನೇ ಸಂಸ್ಥಾಪನ ದಿನದ ಅಂಗ
ವಾಗಿ ನಗರದ ಜೀವನಸಂಧ್ಯಾ ವೃದ್ದಾಶ್ರಮ
ಹಾಗೂ ಆಶಾಕಿರಣ ಅಂಧಮಕ್ಕಳ ಶಾಲೆಗೆ
ವಿಶೇಷ ಊಟದ ವ್ಯವಸ್ಥೆ ಮಾಡುವ
ಮೂಲಕ ಅರ್ಥಪೂರ್ಣವಾಗಿ
ಆಚರಿಸಲಾಯಿತು.ಈ ವೇಳೆ ಮಾತನಾಡಿದ ರೌಂಡ್
ಟೇಬಲ್ ಅಧ್ಯಕ್ಷ ಎನ್.ಎಸ್.ಅನಿಲ್ ಹಿಂದಿನ
ಅಧ್ಯಕ್ಷರುಗಳ ಅವಧಿ ಯಲ್ಲಿ ಹಲವಾರು
ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು
ಬರಲಾಗಿದ್ದು ತಮ್ಮ ಅವಧಿಯಲ್ಲೂ
ಅಸ ಹಾಯಕರು ಹಾಗೂ ಗ್ರಾಮಾಂತರ
ಶಾಲಾಮಕ್ಕಳಿಗೆ ಅನುಕೂಲವಾಗುವ
ಕೆಲಸಗಳಿಗೆ ಒತ್ತು ನೀಡಲಾಗುವು ದು ಎಂದು
ತಿಳಿಸಿದರು. ಕಳೆದ ಇಪ್ಪತ್ತೂರು ವರ್ಷಗಳಿಂದ ರೌಂಡ್
ಟೇಬಲ್ ಜೀವನ ಸಂಧ್ಯಾ ವೃಧ್ದಾಶ್ರಮಕ್ಕೆ
ವಿಶೇಷ ಊಟದ ವ್ಯವಸ್ಥೆ ಮಾಡಿದೆ. ಈ
ವರ್ಷ ಆಶಾಕಿರಣ ಅಂಧಮಕ್ಕಳ ಶಾಲೆಗೆ
ಊಟ ವ್ಯವಸ್ಥೆ ಕಲ್ಪಿಸಿದೆ. ಜೊತೆಗೆ ಜಿಲ್ಲಾ
ಸ್ಪತ್ರೆಗೆ ಐಸಿಯು ಬೆಡ್‌ಗಳನ್ನು ವಿತರಿಸಲಾಗಿದೆ
ಎಂದರು.ತೊಗರಿಹಂಕಾಲ್ ಗ್ರಾಮದ ಶಾಲೆಗೆ 25 ಲಕ್ಷ
ರೂ. ವೆಚ್ಚದಲ್ಲಿ ಶಾಲಾ ಕೊಠಡಿ, ನ.ರಾ.ಪುರ
ತಾಲ್ಲೂ ಕಿಗೆ 4 ಲಕ್ಷ ರೂ.ವೆಚ್ಚದಲ್ಲಿ ವೈದ್ಯಕೀಯ ಉಪಕರಣಗಳ ಕೊಡುಗೆ ಹಾಗೂ
ನಗರದ ಟೌನ್ ಮಹಿಳಾ ಸಮಾ ಜ ಶಾಲೆಗೆ
1 ಲಕ್ಷ ರೂ. ವೆಚ್ಚದಲ್ಲಿ ಸ್ಮಾರ್ಟ್ಕ್ಲಾಸ್ ವ್ಯವಸ್ಥೆ
ಕಲ್ಪಿಸಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ರೌಂಡ್ ಟೇಬಲ್‌ನ ಉಪಾಧ್ಯಕ್ಷ ಟಿ.ಪಿ.ದರ್ಶನ್, ನಿಕಟಪೂರ್ವ ಅಧ್ಯಕ್ಷ ಟಿ.ಎಂ. ರಾಷ್ಟಿçÃತ್, ಕಾರ್ಯದರ್ಶಿ
ಸಮನ್ವಿತ್, ಕೋಶಾಧಿಕಾರಿ ಕಾರ್ತೀಕ ಉಡುಪ,
ಸದಸ್ಯರುಗಳಾದ ಪಿ.ಟಿ.ಸೂರ ಜ್, ಭಾರತಿ,
ಗಗನ್, ಆರಾವ್ ಮತ್ತಿತರರು ಹಾಜರಿದ್ದರು










