ಚಿಕ್ಕಮಗಳೂರು : ವಿಶಾಖ ಹಲಾಲಿಗೆ ಗೌರವ ಡಾಕ್ಟರೇಟ್ ಪದವಿ.

71
firstsuddi

ಚಿಕ್ಕಮಗಳೂರು : ನಗರದ ಕಲ್ಯಾಣ ನಗರದ ವಾಸಿ ನಿವೃತ್ತ ಎಎಸ್ ಐ ಹೆಚ್.ಆರ್. ವಿಶ್ವನಾಥ್ ಮತ್ತು ಜಿಲ್ಲಾ ಆಸ್ಪತ್ರೆಯ ನಿವೃತ್ತ ಹಿರಿಯ ಶುಶ್ರೂಷಕಿ ಬಿ. ಜಯಲಕ್ಷ್ಮಿ ಇವರ ಪುತ್ರಿ ವಿಶಾಖ ವಿ ಹಲಾಲಿ ಇವರಿಗೆ ಬೆಂಗಳೂರಿನ ಜೈನ್ ವಿಶ್ವ ವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಿದೆ.

ರಸಾಯನ ಶಾಸ್ತ್ರ ವಿಭಾಗದಲ್ಲಿ ಕೆಮಿಕಲ್ ಸೆನ್ಸಾರ್ ಎಂಬ ವಿಷಯಕ್ಕೆ ಮಂಡಿಸಿದ್ದ ಪ್ರಬಂಧಕ್ಕೆ ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ. ವಿಶಾಖ ಸಹೋದರ ವಿಕಾಶ್ ಸೇರಿದಂತೆ ಅನೇಕ ಅಭಿಮಾನಿ ಗಳು ಅಭಿನಂದನೆ ಸಲ್ಲಿಸಿದ್ದಾರೆ.