ಚಿಕ್ಕಮಗಳೂರು : ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರು ಪೌರ್ಣಮಿ ಮಹೋತ್ಸವ ಆಚರಣೆ…

490
firstsuddi

ಚಿಕ್ಕಮಗಳೂರು : ವ್ಯಾಸ ಪೌರ್ಣಮಿ ದಿನವಾದ ಮಂಗಳವಾರ ನಗರದ ಗೃಹಮಂಡಳಿ ಬಡಾವಣೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸಹಸ್ರಾರು ಭಕ್ತರ ನಡುವೆ ಗುರು ಪೌರ್ಣಮಿ ಮಹೋತ್ಸವವನ್ನು ವೈಭವದಿಂದ ಆಚರಿಸಲಾಯಿತು.
ಉತ್ಸವದ ಪ್ರಯುಕ್ತ ಬೆಳಗಿನ ಜಾವ ಶ್ರೀ ಶಿರಡಿ ಸಾಯಿಬಾಬಾ ಅವರ ವಿಗ್ರಹಕ್ಕೆ ಕಾಕಡಾರತಿ, ಅಭಿಷೇಕ, ವಿಶೇಷ ಪೂಜೆ, ಅಲಂಕಾರ, ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ನಡೆಯಿತು.
ಇದೇ ವೇಳೆ ಭಕ್ತರಿಂದ ಭಜನೆ, ಸ್ತ್ರೋತ್ರ ಪಠಣ, ನಾಮ ಸಂಕೀರ್ತನೆ ನಡೆದವು, ಮಧ್ಯಾಹ್ನ ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು.

ಗುರು ಪೌರ್ಣಮಿ ಪ್ರಯುಕ್ತ ಶ್ರೀ ಶಿರಡಿ ಸಾಯಿ ಬಾಬಾ ಅವರ ಮೂಲ ವಿಗ್ರಹದ ಪಾದ ಸ್ಪರ್ಶಕ್ಕೆ ಅವಕಾಶವಿದ್ದ ಹಿನ್ನೆಲೆಯಲ್ಲಿ ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಭಕ್ತರು ಬೆಳಗಿನಿಂದ ರಾತ್ರಿಯವರೆಗೆ ಸರತಿ ಸಾಲಿನಲ್ಲಿ ನಿಂತು ಬಾಬಾ ಅವರ ಪಾದ ಸ್ಪರ್ಶಿಸಿ ಪೂಜೆ ಸಲ್ಲಿಸಿದರು.