ಚಿಕ್ಕಮಗಳೂರು : ಲಯನ್ಸ್ ಪದಾಧಿಕಾರಿಗಳು ಮತ್ತು ಸದಸ್ಯರು ಸೇವೆಯನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ಡಾ.ಎ.ಗೀತಪ್ರಕಾಶ್ ಸಲಹೆ ಮಾಡಿದರು.
ನಗರದ ಅನ್ನಪೂರ್ಣ ವೃದ್ದಾಶ್ರಮದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ವೃದ್ದಾಶ್ರಮಕ್ಕೆ ಲಯನ್ಸ್ ವತಿಯಿಂದ ಸೋಲಾರ್ ವಾಟರ್ ಹೀಟರ್ ವಿತರಿಸಿ ಅವರು ಮಾತನಾಡಿದರು.
ನಾವು ಗಳಿಸುವ ಹಣ, ಅಧಿಕಾರ ಅಥವಾ ಅಂತಸ್ತಿನಿಂದ ನಾವು ದೊಡ್ಡರಾಗುವುದಿಲ್ಲ, ಹಣ ಅಧಿಕಾರ ಅಂತಸ್ತು ನಮ್ಮಲ್ಲಿ ಅಹಂಕಾರವನ್ನು ಬೆಳೆಸುತ್ತವೆ. ದಾನ ಮಾಡುವುದರಿಂದ ಮನುಷ್ಯ ದೊಡ್ಡವನಾಗುತ್ತಾನೆ. ಸೇವೆಯಿಂದ ಮಾನಸಿಕ ಶಾಂತಿ, ನೆಮ್ಮದಿ ದೊರೆಯುವುದರ ಜೊತೆಗೆ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಲಯನ್ಸ್ ಅಧ್ಯಕ್ಷ ಸಿ.ಪಿ.ಸುರೇಶ್ ತಮ್ಮ ಮೂರು ವರ್ಷದ ಅವಧಿಯಲ್ಲಿ ಹಲವು ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಸಾಮಾಜಿಕ ಸೇವಾ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಅಂಬಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಧ್ವನಿವರ್ಧಕವನ್ನು ವಿತರಿಸಲಾಯಿತು.
ಲಯನ್ಸ್ ಜಿಲ್ಲಾ ಪ್ರಥಮ ಮಹಿಳೆ ಡಾ.ಗ್ರಾಯತ್ರಿ ಗೀತಪ್ರಕಾಶ್, ಜಿಲ್ಲಾ ಮಾಜಿ ರಾಜ್ಯಪಾಲ ಎಚ್.ಆರ್.ಹರೀಶ್, ವಲಯಾಧ್ಯಕ್ಷೆ ಅನುಸೂಯ ಜಗದೀಶ್, ಎಚ್.ಸಿ.ಶಶಿಪ್ರಸಾದ್, ಪ್ರೋ.ಎಚ್.ಎಸ್. ಜಗದೀಶಪ್ಪ, ಮಂಜುನಾಥ ಗೌಡ, ಉಪಸ್ಥಿತರಿದ್ದರು.










