ಚಿನ್ನಿದಾಂಡು ಆಟದ ವೇಳೆ ಆರಂಭವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ…

99
firstsuddi

ಹಾವೇರಿ : ಚಿನ್ನಿದಾಂಡು ಆಟದ ವೇಳೆ ಆರಂಭವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಎಪಿಎಂಸಿ ವೇಬ್ರಿಡ್ಜ್ ಬಳಿ ನಡೆದಿದೆ. ಉಮೇಶ್ ಶಿವಜೋಗಿಮಠ(40) ಕೊಲೆಯಾದ ದುರ್ದೈವಿ.

ನಿನ್ನೆ ಸಂಜೆ ಎಪಿಎಂಸಿ ಬಳಿಯ ವೇ ಬ್ರಿಡ್ಜ್ ಹತ್ತಿರ ಕೆಲವು ಹುಡುಗರು ಚಿನ್ನಿದಾಂಡು ಆಡುತ್ತಿದ್ದರು. ಆಟದ ವೇಳೆ ಚಿನ್ನಿ ಬಂದು ಉಮೇಶನ ಟಿಪ್ಪರ್ ಗೆ ಬಡಿದಿತ್ತು. ನಂತರ ಉಮೇಶ್ ಮತ್ತು ಚಿನ್ನಿದಾಂಡು ಆಡುತ್ತಿದ್ದವರ ನಡುವೆ ಜಗಳ ಶುರುವಾಗಿದೆ. ಆಗ ಐದಾರು ಜನರು ಬಂದು ಉಮೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಉಮೇಶ್ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಹಾವೇರಿ ಎಸ್ಪಿ ಹನುಮಂತರಾಯ ಹಾಗೂ ಶಿಗ್ಗಾವಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.