ಚೀನಾದ ಆಕ್ರಮಣವನ್ನು ಭಾರತೀಯ ಸೇನೆ ಹೆಮ್ಮೆಟ್ಟಿಸಿದೆ, ಗಡಿಯಲ್ಲಿ ಶಾಂತಿ ಸ್ಥಾಪಿಸಲಾಗಿದೆ : ರಾಜನಾಥ್ ಸಿಂಗ್.

50
firstsuddi

ನವದೆಹಲಿ : ಅರುಣಾಚಲ ಪ್ರದೇಶದ ಗಡಿಯ ತವಾಂಗ್ ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಘರ್ಷಣೆಯ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿಗೆ ಮಾಹಿತಿ ನೀಡಿದರು. ಚೀನಾದ ಆಕ್ರಮಣವನ್ನು ನಮ್ಮ ಹೆಮ್ಮೆಯ ಸೇನೆ ಹೆಮ್ಮೆಟ್ಟಿಸಿದೆ, ಗಡಿಯಲ್ಲಿ ಶಾಂತಿ ನೆಲೆಗೊಳ್ಳುವಂತೆ ನೋಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ನಮ್ಮ ದೇಶದ ಗಡಿಯೊಳಗೆ ಚೀನಾದ ಸೈನಿಕರು ಒಳನುಸುಳುವ ಪ್ರಯತ್ನವನ್ನು ಭಾರತೀಯ ಸಶಸ್ತ್ರ ಪಡೆಗಳು ಹತ್ತಿಕ್ಕಿವೆ. ಡಿಸೆಂಬರ್ 9ರಂದು ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಯಲ್ಲಿ ಯಾವುದೇ ಯೋಧ ಸಾವನ್ನಪ್ಪಿಲ್ಲ ಅಥವಾ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ಹೇಳಿದ್ದಾರೆ.

ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ಎರಡೂ ಕಡೆಯ ಸೈನಿಕರಿಗೆ ಗಾಯಗಳಾಗಿವೆ. ಆದರೆ, ನಮ್ಮ ದೇಶದ ಸೈನಿಕರಿಗೆ ಯಾವುದೇ ಗಂಭೀರವಾದ ಗಾಯಗಳಾಗಿಲ್ಲ. ಶಾಂತಿ ಕಾಪಾಡಲು ಚೀನಾ ಸೇನಾ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಾಗುತ್ತಿದೆ. ಭಾರತ ಎಲ್ಲ ದಾಳಿಗಳನ್ನು ತಡೆಯುವ ಶಕ್ತಿ ಹೊಂದಿದೆ. ಭಾರತ ಶೌರ್ಯ ಕ್ಷಮತೆಯನ್ನು ನಾನು ಅಭಿನಂದಿಸುತ್ತೇನೆ ಎಂದು ಲೋಕಸಭೆಯಲ್ಲಿ ರಾಜನಾಥ್ ಸಿಂಗ್ ಉತ್ತರಿಸಿದ್ದಾರೆ.

ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಯು ವಿರೋಧ ಪಕ್ಷಗಳಿಗೆ ತೃಪ್ತಿ ನೀಡಲಿಲ್ಲ. ಹೀಗಾಗಿ, ಪ್ರತಿಭಟನೆ ನಡೆಸಿದ ಅವರು ಹೊರನಡೆದರು.