ಜನರ ಬಳಿ ಸುಲಿಗೆ ಮಾಡ್ತಿದ್ದೀರಾ? ನಿಮಗೆ ಸ್ವಲ್ಪನಾದ್ರೂ ಮಾನ ಮರ್ಯಾದೆ ಇಲ್ವಾ – ಅಧಿಕಾರಿಗಳಿಗೆ ರವೀಂದ್ರ ಶ್ರೀಕಂಠಯ್ಯ ತರಾಟೆ…

68
firstsuddi

ಮಂಡ್ಯ : ಜನರ ಬಳಿ ಸುಲಿಗೆ ಮಾಡ್ತಿದ್ದೀರಾ, ಸರ್ಕಾರದಿಂದ ಸಂಬಳವನ್ನು ತೆಗೆದುಕೊಳ್ಳುತ್ತಿದ್ದೀರಿ, ನಿಮಗೆ ಸ್ವಲ್ಪನಾದ್ರೂ ಮಾನ ಮರ್ಯಾದೆ ಇಲ್ವಾ ಎಂದು ಅಧಿಕಾರಿಗಳನ್ನು ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಜಿಲ್ಲೆಯ ಶ್ರೀರಂಗಪಟ್ಟಣದ ಸರ್ವೆ ಇಲಾಖೆಯ ಅಧಿಕಾರಿಗಳ ವಿರುದ್ಧ ರವೀಂದ್ರ ಶ್ರೀಕಂಠಯ್ಯಗೆ ಹಲವು ದಿನಗಳಿಂದ ದೂರು ಕೇಳಿಬಂದಿತ್ತು. ಹೀಗಾಗಿ ದೂರಿನ ಮೇರೆಗೆ ಪರಿಶೀಲನೆಗೆ ರವೀಂದ್ರ ಶ್ರೀಕಂಠಯ್ಯ ಇಲಾಖೆಯ  ಕಚೇರಿಗೆ ಭೇಟಿ ನೀಡಿದ್ದ ವೇಳೆ ಸಂಬಳ ತಗೊಳ್ತೀರಾ ನಿಮಗೆ ಮಾನ ಮರ್ಯಾದೆ ಇಲ್ವಾ, ದಾಖಲೆಗಳನ್ನ ನೀವು ಕಳೆದುಕೊಂಡು ಜನರತ್ರ ಸುಲಿಗೆ ಮಾಡ್ತಿದ್ದೀರಾ ಎಂದು ಸರ್ವೇ ಇಲಾಖೆ ಸೂಪರ್ ವೈಸರ್ ಸುರೇಶ್ ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಅವರು, ಈ ವೇಳೆ ಸರ್ವೆ ಇಲಾಖೆ ಮೇಲಧಿಕಾರಿಗಳಿಗೂ ಫೋನ್ ಮೂಲಕ ಶಾಸಕರು ತರಾಟೆಗೆ ತೆಗೆದುಕೊಂಡಿದ್ದಾರೆ.

ಹಿರಿಯ ಅಧಿಕಾರಿಗಳಾಗಿ ನೀವು ಏನು ಮಾಡುತ್ತಿದ್ದೀರಿ? ನಿಮ್ಮ ಸಿಬ್ಬಂದಿಯನ್ನ ದರೋಡೆ ಮಾಡಲು ಜನರ ಮೇಲೆ ಬಿಟ್ಟಿದ್ದೀರಾ? ನೀವು ಕೇಂದ್ರ ಕಚೇರಿಯಲ್ಲಿ ಕುಳಿತು ಏನು ಮಾಡುತ್ತಿದ್ದೀರಿ. ತಾಲೂಕು ಕಚೇರಿಗೆ ಒಮ್ಮೆಯಾದರೂ ಭೇಟಿ ನೀಡಿದ್ದೀರಾ? ನಿಮ್ಮನ್ನ ಬೇರೆ ಕಾನೂನು ಮಾಡಿ ಅಂತಿದ್ದೀವಾ..? ಕಾನೂನು ಏನಿದೆ ಅದನ್ನೇ ಮಾಡಿ. ನೀವು ಭೇಟಿ ನೀಡಿ ಪರಿಶೀಲನೆ ನಡೆಸಿದ್ರೆ ಹೀಗೆ ಆಗುತ್ತಿತ್ತಾ ಎಂದು ಹಿರಿಯ ಅಧಿಕಾರಿಗಳ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದ್ದಾರೆ. ಮೇಲ್ವಿಚಾರಕ ಸುರೇಶ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ರವೀಂದ್ರ ಶ್ರೀಕಂಠಯ್ಯ ಗರಂ ಆದರು.

ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಮಾಡಿರೋದು. ಅದಕ್ಕೆ ಬೀಗ ಹಾಕಿದರೆ ಏನು ಅರ್ಥ ಅಂತಾ ಹಿರಿಯ ಅಧಿಕಾರಿಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಶೌಚಾಲಯ ಬೀಗ ಓಪನ್ ಮಾಡಿಸುತ್ತೇವೆ ಎಂದರು. ಅದಕ್ಕೆ ಮತ್ತೆ ಗರಂ ಆದ ಶಾಸಕರು, ಓಪನ್ ಮಾಡ್ಸೋದು ಅಲ್ಲ ಸ್ವಚ್ಚವಾಗಿಟ್ಟುಕೊಳ್ಳಿ. ಎಂದು ಸೂಚಿಸಿದರು.